ನವದೆಹಲಿ: ಪ್ರಸಕ್ತ ವರ್ಷದ ಆಗಸ್ಟ್ನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್ಒ) ಹೊಸದಾಗಿ 18.53 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೇರ್ಪಡೆಯಾದವರ ಪ್ರಮಾಣದಲ್ಲಿ ಶೇ 9ರಷ್ಟು ಏರಿಕೆಯಾಗಿದೆ ಎಂದು ಇಪಿಎಫ್ಒ, ಭಾನುವಾರ ತಿಳಿಸಿದೆ.

ರಾಜ್ಯವಾರು ಪೈಕಿ ಸದಸ್ಯರ ಸೇರ್ಪಡೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ಶೇ 20ರಷ್ಟು ಪಾಲನ್ನು ಹೊಂದಿದೆ. ಕರ್ನಾಟಕ, ತಮಿಳುನಾಡು, ಹರಿಯಾಣ, ದೆಹಲಿ, ಗುಜರಾತ್, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿಯೂ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ.

ಉದ್ಯೋಗಾವಕಾಶ ಹೆಚ್ಚಳ, ಉದ್ಯೋಗಿಗಳಲ್ಲಿ ಲಾಭದ ಬಗ್ಗೆ ಹೆಚ್ಚಿದ ಜಾಗೃತಿ ಮತ್ತು ಇಪಿಎಫ್ಒ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಿಂದ ಸದಸ್ಯರ ಸಂಖ್ಯೆ ಏರಿಕೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಹೊಸ ಸದಸ್ಯರಲ್ಲಿ 18ರಿಂದ 25ರ ವಯೋಮಾನದವರ ಪ್ರಮಾಣ ಶೇ 59ರಷ್ಟಿದೆ. ಒಟ್ಟು 8.06 ಲಕ್ಷ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಬಹುತೇಕರು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದ್ದಾರೆ. ಹೊಸ ಸದಸ್ಯರ ಪೈಕಿ 2.53 ಲಕ್ಷ ಮಹಿಳೆಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.