ಬೆಂಗಳೂರು: ಫಾಸ್ಟ್ರ್ಯಾಕ್ ಕಂಪನಿಯು ವಿಶ್ವದಲ್ಲಿಯೇ ಅತಿ ತೆಳುವಾದ (9 ಎಂಎಂ) ಸ್ಮಾರ್ಟ್ ಬ್ಯಾಂಡ್ ‘ರಿಫ್ಲೆಕ್ಸ್ ವೇವ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸಾಧನವು ಗೆಸ್ಚರ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ.ಬೆಲೆ ₹ 4,995. ಮೊಬೈಲ್ ಜತೆ ಸಂಪರ್ಕಿಸಿದರೆ, ಕರೆ ನಿರಾಕರಿಸಲು, ಸೆಲ್ಫಿ ತೆಗೆಯಲು, ನೋಟಿಫಿಕೇಷನ್ ಓದಲು ಹಾಗೂ ಮ್ಯೂಸಿಕ್ ಅನ್ನು ಫಾರ್ವರ್ಡ್ ಅಥವಾ ಬ್ಯಾಕ್ವರ್ಡ್ ಮಾಡುವ ವಿಶಿಷ್ಟ ಆಯ್ಕೆಗಳನ್ನು ಒಳಗೊಂಡಿದೆ.

‘ಕೈಯನ್ನು ಬಲಕ್ಕೆ ತಿರುಗಿಸಿದರೆ ಹಾಡು ಫಾರ್ವರ್ಡ್ ಆಗುತ್ತದೆ. ಎಡಕ್ಕೆ ತಿರುಗಿಸಿದರೆ ಬ್ಯಾಕ್ವರ್ಡ್ ಆಗುತ್ತದೆ. ಇದಲ್ಲದೆ, 24 ಗಂಟೆಯವರೆಗೆ ನಿದ್ರೆ ಯ ಮೇಲೆ ನಿಗಾ ಇರಿಸುವ, ಕ್ಯಾಲೆಂಡರ್ ಅಲರ್ಟ್ಸ್ ನೀಡುವ ಆಯ್ಕೆಗಳೂ ಇದರಲ್ಲಿವೆ. ಇದರ ಬ್ಯಾಟರಿ ಐದು ದಿನಗಳವರೆಗೆ ಬಾಳಿಕೆ ಬರುತ್ತದೆ’ ಎಂದು ಟೈಟಾನ್ ಕಂಪನಿಯ ಸಿಇಒ ಎಸ್. ರವಿಕಾಂತ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.