ನವದೆಹಲಿ: ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡದ ರೂಪದಲ್ಲಿ ಶುಲ್ಕ ವಿಧಿಸುವ ಮೂಲಕ ಸಾರ್ವಜನಿಕ ವಲಯದ 12 ಬ್ಯಾಂಕ್ಗಳು, 2019–20ರಿಂದ 2023–24ರ ನಡುವೆ ಒಟ್ಟು ₹8,494 ಕೋಟಿ ಸಂಗ್ರಹಿಸಿವೆ.

‘ಈ ಮೊತ್ತದ ಪೈಕಿ 2023–24ರಲ್ಲಿ ₹2,331 ಕೋಟಿ ಸಂಗ್ರಹಿಸಲಾಗಿದೆ. ಐದು ವರ್ಷಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ₹1,537 ಕೋಟಿ ಶುಲ್ಕ ಸಂಗ್ರಹಿಸಿದೆ’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಂಡಿಯನ್ ಬ್ಯಾಂಕ್ ₹1,466 ಕೋಟಿ, ಬ್ಯಾಂಕ್ ಆಫ್ ಬರೋಡಾ ₹1,250 ಕೋಟಿ, ಕೆನರಾ ಬ್ಯಾಂಕ್ ₹1,157 ಕೋಟಿ, ಬ್ಯಾಂಕ್ ಆಫ್ ಇಂಡಿಯಾ ₹827 ಕೋಟಿ, ಸೆಂಟ್ರಲ್ ಬ್ಯಾಂಕ್ ₹587 ಕೋಟಿ, ಬ್ಯಾಂಕ್ ಆಫ್ ಮಹಾರಾಷ್ಟ್ರ ₹470 ಕೋಟಿ, ಯೂನಿಯನ್ ಬ್ಯಾಂಕ್ ₹414 ಕೋಟಿ, ಯುಕೊ ಬ್ಯಾಂಕ್ ₹66 ಕೋಟಿ, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ₹55 ಕೋಟಿ, ಓವರ್ಸೀಸ್ ಬ್ಯಾಂಕ್ ₹19 ಕೋಟಿ ಸಂಗ್ರಹಿಸಿವೆ ಎಂದು ವಿವರಿಸಿದ್ದಾರೆ.

2020ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದಂಡದ ರೂಪದಲ್ಲಿ ಶುಲ್ಕ ಸಂಗ್ರಹಿಸುವುದನ್ನು ಕೈಬಿಟ್ಟಿದೆ. ಆದರೆ, 2019–20ರ ವರೆಗೆ ಈ ಬ್ಯಾಂಕ್ ಒಟ್ಟು ₹640 ಕೋಟಿ ಶುಲ್ಕ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.