ನವದೆಹಲಿ: ಮಹಿಳೆಯರ ಜನ್ಧನ್ ಖಾತೆಗೆ ₹ 500 ನೆರವಿನ ಮೂರನೇ ಮತ್ತು ಕೊನೆಯ ಕಂತು ಶುಕ್ರವಾರದಿಂದ ಜಮೆಯಾಗಲಿದೆ.

ದಿಗ್ಬಂಧನದಿಂದಾಗಿ ಬಡ ಕುಟುಂಬಗಳಿಗೆ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಗೆ ನೆರವಾಗಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ನಡಿ ಜನ್ಧನ್ ಖಾತೆಗಳಿಗೆ ಮೂರು ತಿಂಗಳವರೆಗೆ ಪ್ರತಿ ತಿಂಗಳೂ ₹ 500 ಪಾವತಿಸಲು ಘೋಷಿಸಲಾಗಿತ್ತು.

ಸಾಮಾಜಿಕ ಅಂತರ ಕಾಯ್ದುಕೊಂಡು ಫಲಾನುಭವಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಹಣ ವಿತರಿಸಲು ಬ್ಯಾಂಕ್ಗಳು ವೇಳಾಪಟ್ಟಿ ನಿಗದಿಪಡಿಸಿವೆ. ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ಅಂಕಿಗೆ ಅನುಗುಣವಾಗಿ ಹಣ ಹಿಂದೆ ಪಡೆಯಲು ದಿನ ನಿಗದಿಪಡಿಸಲಾಗಿದೆ.

ಇದೇ 5 ರಿಂದ 10ರವರೆಗೆ ನಿರ್ದಿಷ್ಟ ಫಲಾನುಭವಿಗಳು ತಮ್ಮ ಖಾತೆಯಿಂದ ಹಣ ಹಿಂದೆ ಪಡೆಯಬಹುದು.

ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಆಗುವುದರಿಂದ ಹಣ ಹಿಂದೆ ಪಡೆಯಲು ಯಾರೊಬ್ಬರೂ ಧಾವಂತ ಪಡಬಾರದು. ಮನೆ ಸಮೀಪದ ಎಟಿಎಂ, ಬ್ಯಾಂಕ್ ಮಿತ್ರ, ಗ್ರಾಹಕರ ಸೇವಾ ಕೇಂದ್ರಗಳ (ಸಿಎಸ್ಪಿ) ಮೂಲಕವೂ ಹಣ ಹಿಂದೆ ಪಡೆಯಬಹುದು. ಅನ್ಯ ಎಟಿಎಂ ಬಳಕೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.