ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಡಿ(ಸಿಪಿಸಿಬಿ) ನೋಂದಣಿಯಾಗದ ಫ್ಲಿಪ್ಕಾರ್ಟ್ ಹಾಗೂ ಪತಂಜಲಿ ಪೇಯ ಕಾರ್ಯಾಚರಣೆ ಸ್ಥಗಿತಗೊಳಿಸಲು ಶೋಕಾಸ್ ನೋಟಿಸ್ ನೀಡಿರುವುದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ(ಎನ್ಜಿಟಿ) ಸಿಪಿಸಿಬಿ ಮಾಹಿತಿ ನೀಡಿದೆ.

‘ಪರಿಸರ(ಸಂರಕ್ಷಣೆ)ಕಾಯ್ದೆ, 1986ರ ಸೆಕ್ಷನ್ 5ರಡಿ ಅ.8ರಂದು ಕಾರ್ಯಾಚರಣೆ ಸ್ಥಗಿತಗೊಳಿಸಲು ಈ ಕಂಪನಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ(ತಿದ್ದುಪಡಿ) ನಿಯಮ 2018ಕ್ಕೆ ಅನುಸಾರವಾಗಿ ನಡೆದುಕೊಳ್ಳದ ಕಾರಣ ದಂಡ ಪಾವತಿಸಲೂ ಸೂಚಿಸಲಾಗಿದೆ’ ಎಂದು ಎನ್ಜಿಟಿಗೆ ಸಲ್ಲಿಸಿದ ವರದಿಯಲ್ಲಿ ಸಿಪಿಸಿಬಿ ಉಲ್ಲೇಖಿಸಿದೆ.

ಕ್ರಮಕ್ಕೆ ಸೂಚನೆ: ನೋಂದಣಿ ಮಾಡಿಕೊಳ್ಳದೇ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ(ಎಸ್ಪಿಸಿಬಿ)ಸೂಚಿಸಲಾಗಿದೆ ಎಂದು ಎಸ್ಪಿಸಿಬಿಗಳಿಗೆ ಸಿಪಿಸಿಬಿ ನಿರ್ದೇಶಿಸಿದೆ.

‘ಹಿಂದೂಸ್ತಾನ್ ಕೋಕಾಕೋಲಾ ಬೆವರೇಜಸ್ ಪ್ರೈ.ಲಿ., ಪೆಪ್ಸಿಕೊ ಇಂಡಿಯಾ ಹೋಲ್ಡಿಂಗ್ ಪ್ರೈ.ಲಿ., ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈ.ಲಿ. ಹಾಗೂ ಎಂಎಸ್ ನೌರಿಶ್ಕೊ ಬೆವರೇಜಸ್ ಲಿ.ಕಂಪನಿಗಳು ಸಿಬಿಸಿಬಿಯಡಿ ನೋಂದಣಿಯಾಗಿವೆ. ಹೀಗಿದ್ದರೂ, ‘ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ(ತಾವೇ ಉತ್ಪಾದಿಸಿದ ಪ್ಲಾಸ್ಟಿಕ್ ತ್ಯಾಜ್ಯದಮರುಸಂಗ್ರಹ) ಕಾರ್ಯಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಿದದಾಖಲೆಗಳಿಗೆ ಆಯಾ ರಾಜ್ಯದಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ಪಡೆಯದ ಕಾರಣ ಶೋಕಾಸ್ ನೋಟಿಸ್ ನೀಡಲಾಗಿದೆ’ ಎಂದು ಸಿಪಿಸಿಬಿ ತನ್ನ ವರದಿಯಲ್ಲಿ ತಿಳಿಸಿದೆ.

ದಂಡ ವಿಧಿಸಿ:ಪರಿಸರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ಗೆ ದಂಡ ವಿಧಿಸುವಂತೆ ಸಿಪಿಸಿಬಿಗೆ, ಎನ್ಜಿಟಿ ಸೂಚಿಸಿತು.

ನೋಂದಣಿಯಾಗದ ಬ್ರ್ಯಾಂಡ್ಗಳ ವಿರುದ್ಧ ಕ್ರಮಕ್ಕೆ ಸೂಚನೆ

ನೋಂದಣಿ ಮಾಡಿಕೊಳ್ಳದೇ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಎಲ್ಲ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ(ಎಸ್ಪಿಸಿಬಿ)ಸೂಚಿಸಲಾಗಿದೆ. ನೋಂದಣಿಯಾಗದ ಕಂಪನಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು ಜೊತೆಗೆ ದಂಡವನ್ನೂ ವಿಧಿಸಬಹುದು ಎಂದು
ಎಸ್ಪಿಸಿಬಿಗಳಿಗೆ ಸಿಪಿಸಿಬಿ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.