ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್ಕಾರ್ಟ್ ತನ್ನ ಬಳಕೆದಾರರಿಗೆ ಯುಪಿಐ ಹ್ಯಾಂಡಲ್ ಪರಿಚಯಿಸಿದ್ದು ಅಮೆಜಾನ್ ಪೇ, ಫೋನ್ಪೇ, ಪೇಟಿಎಂ, ಗೂಗಲ್ ಪೇಗೆ ಪೈಪೋಟಿ ನೀಡಲು ಮುಂದಾಗಿದೆ.

ಫ್ಲಿಪ್ಕಾರ್ಟ್ನ 500 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ಸೇರಿದಂತೆ ಎಲ್ಲಾ ಬಳಕೆದಾರರಿಗೂ ಈ ಡಿಜಿಟಲ್ ಪಾವತಿ ಕೊಡುಗೆಗಳ ಸೇವೆಯನ್ನು ವಿಸ್ತರಿಸಿದೆ. ಯುಪಿಐ ಚಾಲನೆ ಬಳಿಕ ಸೂಪರ್ ಕಾಯಿನ್ಗಳು, ಕ್ಯಾಷ್ಬ್ಯಾಕ್, ಮೈಲ್ಸ್ಟೋನ್ ಪ್ರಯೋಜನಗಳು ದೊರೆಯುತ್ತದೆ. ಬ್ರ್ಯಾಂಡ್ ವೋಚರ್ ಮುಂತಾದ ಲಾಯಲ್ಟಿ ವೈಶಿಷ್ಟ್ಯಗಳೂ ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ.

‘ಭಾರತ್ ಕಾ ಅಪ್ನಾ ಯುಪಿಐ’ ಎಂಬ ಅಡಿಬರಹದ ಜೊತೆಗೆ, ಈ ನವೀನ ಮತ್ತು ಸುರಕ್ಷಿತ ಪರಿಹಾರವು ದೇಶದಾದ್ಯಂತ ಬಳಕೆದಾರರಿಗೆ ಸಮಗ್ರ ಪಾವತಿಯ ಅನುಭವವನ್ನು ನೀಡುತ್ತದೆ. ಎಕ್ಸಿಸ್ ಬ್ಯಾಂಕ್ ಚಾಲಿತ ಫ್ಲಿಪ್ಕಾರ್ಟ್ ಯುಪಿಐ ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಇರುತ್ತದೆ. ಗ್ರಾಹಕರು ಈಗ ‘@fkaxis’ ಹ್ಯಾಂಡಲ್ ಮೂಲಕ ಯುಪಿಐಗೆ ನೋಂದಾಯಿಸಿಕೊಳ್ಳಬಹುದು. ಜೊತೆಗೆ, ಫ್ಲಿಪ್ಕಾರ್ಟ್ ಆ್ಯಪ್ ಬಳಸಿ ಹಣ ವರ್ಗಾವಣೆ ಮತ್ತು ಚೆಕ್ಔಟ್ ಪಾವತಿಗಳನ್ನೂ ಮಾಡಬಹುದಾಗಿದೆ ಎಂದು ವಿವರಿಸಿದೆ.

ಫ್ಲಿಪ್ಕಾರ್ಟ್ ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಆನ್ಲೈನ್ ಮತ್ತು ಆಫ್ಲೈನ್ ವಹಿವಾಟು ನಡೆಸಲು ಬಳಕೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಕ್ಲಿಕ್ನಲ್ಲಿ ರೀಚಾರ್ಜ್ ಮತ್ತು ಬಿಲ್ ಪಾವತಿ ಮಾಡಬಹುದು. ಬಳಕೆದಾರರಿಗೆ ಪಾವತಿಗಳಲ್ಲಿ ಉತ್ತಮ ಸೇವೆ ಒದಗಿಸಲಾಗುತ್ತದೆ ಎಂದು ತಿಳಿಸಿದೆ.

‘ಕ್ರಿಯಾತ್ಮಕ ಡಿಜಿಟಲ್ ಸಾಧ್ಯತೆಗಳನ್ನು ಗುರುತಿಸಿ ಫ್ಲಿಪ್ಕಾರ್ಟ್ ಈ ಸೇವೆ ಆರಂಭಿಸಿದೆ. ಗ್ರಾಹಕರಿಗೆ ದಕ್ಷತೆಯ ಸೇವೆ ನೀಡುವುದೇ ಇದರ ಗುರಿಯಾಗಿದೆ. ಫ್ಲಿಪ್ಕಾರ್ಟ್ನಲ್ಲಿ ವ್ಯಾಪಕ ಶ್ರೇಣಿಯ ರಿವಾರ್ಡ್ಗಳು, ಸೂಪರ್ ಕಾಯಿನ್ಗಳು, ಬ್ರಾಂಡ್ ವೋಚರ್ಗಳು ಸೇರಿದಂತೆ ಹಲವು ಪ್ರಯೋಜನಗಳು ದೊರೆಯುತ್ತವೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಾಣಿಜ್ಯ ಸೇವೆ ನೀಡುವುದೇ ಕಂಪನಿಯ ಆದ್ಯತೆಯಾಗಿದೆ’ ಎಂದು ಫ್ಲಿಪ್ಕಾರ್ಟ್ನ ಫಿನ್ಟೆಕ್ ಮತ್ತು ಪೇಮೆಂಟ್ಸ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಧೀರಜ್ ಅನೆಜಾ ಹೇಳಿದ್ದಾರೆ.

‘ಎಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಪಾಲುದಾರಿಕೆಗಳು ಮತ್ತು ನಾವೀನ್ಯಗಳೊಂದಿಗೆ ಯುಪಿಐನಲ್ಲಿ ನಾವು ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತಿದ್ದೇವೆ. ಫ್ಲಿಪ್ಕಾರ್ಟ್ ಜೊತೆಗಿನ ಬ್ಯಾಂಕ್ನ ಸಹಭಾಗಿತ್ವವು ದೇಶದ ಅತ್ಯಂತ ಯಶಸ್ವಿ ಕೊ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ಗಳಲ್ಲಿ ಒಂದಾಗಿದೆ. ಈಗ ಫ್ಲಿಪ್ಕಾರ್ಟ್ ಯುಪಿಐ ಸೇವೆಯಿಂದ ಮತ್ತಷ್ಟು ಬಲಗೊಳ್ಳಲಿದೆ’ ಎಂದು ಪಾಲುದಾರಿಕೆ ಕುರಿತು ಎಕ್ಸಿಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮುಖ್ಯಸ್ಥ ಸಂಜೀವ್ ಮೊಘೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.