ನವದೆಹಲಿ: ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 19 ರಷ್ಟು ಕುಸಿತ ಕಂಡಿದ್ದ ‘ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ’ (ಎಫ್‌ಎಂಸಿಜಿ) ಉದ್ಯಮವು ಸೆಪ್ಟೆಂ ಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸಿದೆ. ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿ ಕಕ್ಕೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂ ಬರ್ ತ್ರೈಮಾಸಿಕದಲ್ಲಿ ಶೇಕಡ 1.6ರಷ್ಟು ಬೆಳವಣಿಗೆ ಕಂಡಿದೆ ಎಂದು ನೀಲ್ಸನ್ ವರದಿ ಹೇಳಿದೆ.

ಮೂರನೆಯ ತ್ರೈಮಾಸಿಕದ ಅವಧಿಯಲ್ಲಿ ಲಾಕ್‌ಡೌನ್ ನಿಯಮಗಳು ಸಡಿಲಿಕೆ ಆದವು. ಇದು ಉದ್ಯಮವು ಶೇಕಡ 1.6ರಷ್ಟು ಚೇತರಿಕೆ ಕಂಡು ಕೊಳ್ಳಲು ನೆರವಾಯಿತು. ಸಾಂಕ್ರಾಮಿಕ ಹರಡುವಿಕೆಯು ಸ್ಥಿರವಾದ ಮಟ್ಟವನ್ನು ತಲುಪಿದ್ದು ಹಾಗೂ ವಾಣಿಜ್ಯೋದ್ಯಮಗಳು ಪುನಃ ಬಾಗಿಲು ತೆರೆದಿದ್ದು ಕೂಡ ಬೇಡಿಕೆ ಹೆಚ್ಚಲು ಕಾರಣವಾದವು ಎಂದು ವರದಿ ಹೇಳಿದೆ.

ಮಾರುಕಟ್ಟೆಗಳು ಹಂತಹಂತವಾಗಿ ತೆರೆಯಲು ಆರಂಭವಾದವು. 2020ರ ಎರಡನೆಯ ತ್ರೈಮಾಸಿಕದಲ್ಲಿ ತಿಂಗಳಲ್ಲಿ ಸರಾಸರಿ ಒಂಬತ್ತು ದಿನ ಅಂಗಡಿಗಳು ಮುಚ್ಚಿರುತ್ತಿದ್ದವು. ಇದು ಮೂರನೆಯ ತ್ರೈಮಾಸಿಕದಲ್ಲಿ ತಿಂಗಳಿಗೆ ಸರಾಸರಿ ಮೂರು ದಿನಗಳಿಗೆ ಇಳಿಕೆ ಕಂಡಿತು ಎಂದು ನೀಲ್ಸನ್ ಹೇಳಿದೆ.

ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟ ಚೇತರಿಕೆಯಲ್ಲಿ ಹೆಚ್ಚಿನ ಕೊಡುಗೆಯನ್ನು ಗ್ರಾಮಾಂತರ ಪ್ರದೇಶಗಳ ಗ್ರಾಹಕರು ನೀಡಿದ್ದಾರೆ.

ಮೂರನೆಯ ತ್ರೈಮಾಸಿಕದಲ್ಲಿ ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟವು ಗ್ರಾಮಾಂತರ ಪ್ರದೇಶಗಳಲ್ಲಿ ಶೇಕಡ 10.6ರಷ್ಟು ಬೆಳವಣಿಗೆ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.