ನವದೆಹಲಿ: ‘ಭಾರತದಲ್ಲಿ ಡೀಸೆಲ್ ಎಂಜಿನ್ ವಾಹನಗಳ ಮಾರಾಟ ನಿಲ್ಲಿಸುವ ಯಾವುದೇ ಚಿಂತನೆ ಇಲ್ಲ’ ಎಂದು ಫೋರ್ಡ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ತಿಳಿಸಿದ್ದಾರೆ.

‘2020ರ ಏಪ್ರಿಲ್1ರ ಗಡುವಿಗೂ ಮೊದಲೇಬಿಎಸ್–6 ಮಾನದಂಡಕ್ಕೆ ಅನುಗುಣವಾಗಿ ಡೀಸೆಲ್ ಎಂಜಿನ್ ಮಾದರಿಗಳು ಸಿದ್ಧಗೊಂಡಿವೆ. ಭಾರತದ ಗ್ರಾಹಕರಿಗೆ ನೀಡುತ್ತಿರುವ ಆಯ್ಕೆಯ ಅವಕಾಶವನ್ನು ಮುಂದುವರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಒಟ್ಟಾರೆ ವಾಹನ ಖರೀದಿಯಲ್ಲಿ ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ ಶೇ 65 ರಷ್ಟು ಮಂದಿ ಡೀಸೆಲ್ ಎಂಜಿನ್ ಇರುವ ಇಕೊಸ್ಪೋರ್ಟ್ಸ್ ಖರೀದಿಸುತ್ತಿದ್ದಾರೆ. ಸದ್ಯ, ಡೀಸೆಲ್ ವಾಹನಗಳಿಗೆ ಬೇಡಿಕೆ ಇದೆ. 2020ರ ನಂತರವೂ ಬೇಡಿಕೆ ಹೆಚ್ಚಾಗಲಿದೆ ಎಂದು ನಂಬಿದ್ದೇವೆ.

‘ಬಿಎಸ್–6ನಿಂದಾಗಿ ವಾಹನಗಳ ಬೆಲೆ ಶೇ 8 ರಿಂದ ಶೇ 10ರವರೆಗೂ ಏರಿಕೆಯಾಗಲಿದೆ. ಡೀಸೆಲ್ ವಾಹನಗಳ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗುವುದಿಲ್ಲ. ಎಲ್ಲಾ ಮಾದರಿಯ ಬೆಲೆಯೂ ಹೆಚ್ಚಾಗಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.