ಬೆಂಗಳೂರು: ವಾಹನ ತಯಾರಿಕಾ ಸಂಸ್ಥೆ ಫೋರ್ಡ್ ಇಂಡಿಯಾ, ಇದೇ 7 ರಿಂದ 9ರವರೆಗೆ ‘ಮಿಡ್ನೈಟ್ ಸರ್ಪ್ರೈಸ್’ ವಿಶೇಷ ಮಾರಾಟ ಹಮ್ಮಿಕೊಂಡಿದೆ.

ಈ ಮೂರು ದಿನಗಳಲ್ಲಿ ದೇಶದಾದ್ಯಂತ ಫೋರ್ಡ್ ಡೀಲರ್ಶಿಪ್ಗಳು ಬೆಳಿಗ್ಗೆ 9ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ತೆರೆದಿರುತ್ತವೆ. ಖರೀದಿದಾರರಿಗೆ ನೀಡುವ ಸ್ಕ್ರ್ಯಾಚ್ ಕಾರ್ಡ್ನ ಅದೃಷ್ಟಶಾಲಿಗಳಿಗೆ ಎಲ್ಇಡಿ ಟಿವಿ, ವಾಷಿಂಗ್ ಮಷಿನ್, ಹೋಂ ಥೇಟರ್ ಸಿಸ್ಟಮ್, ಐಪ್ಯಾಡ್, ಐಫೋನ್, ₹ 1 ಲಕ್ಷ ಮೊತ್ತದ ಚಿನ್ನದ ಗಿಫ್ಟ್ ವೋಚರ್, ಪ್ಯಾರಿಸ್ನ 7 ದಿನಗಳ ಪ್ರವಾಸಿ ಕೊಡುಗೆ ಗೆಲ್ಲುವ ಅವಕಾಶ ಇರಲಿದೆ. ಬಂಪರ್ ಬಹುಮಾನ ರೂಪದಲ್ಲಿ ಫೋರ್ಡ್ ಫಿಗೊ ಕಾರ್ ಕೂಡ ಇರಲಿದೆ. ಈ ಎಲ್ಲ ಕೊಡುಗೆಗಳ ಒಟ್ಟಾರೆ ಮೊತ್ತ ₹ 11 ಕೋಟಿಗಳಷ್ಟಿದೆ.

‘ಈ ಅವಧಿಯಲ್ಲಿ ಕಾರ್ ಬುಕಿಂಗ್ ಮಾಡುವ ಪ್ರತಿಯೊಬ್ಬರೂ ಒಂದಲ್ಲ ಒಂದು ಬಹುಮಾನ ಗೆಲ್ಲುವುದು ಖಚಿತವಾಗಿರುತ್ತದೆ. ಫೋರ್ಡ್ ಕಾರ್ ಮಾಲೀಕರ ಸಂಖ್ಯೆ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.