ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ನವೆಂಬರ್ 1ರಿಂದ 25ರವರೆಗೆ ದೇಶದ ಬಂಡವಾಳ ಮಾರುಕಟ್ಟೆಗಳ ಮೂಲಕ ₹ 31,630 ಕೋಟಿ ಹೂಡಿಕೆ ಮಾಡಿದ್ದಾರೆ.

ಬಡ್ಡಿ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿ ಮಾಡುವ ಪ್ರಕ್ರಿಯೆಗೆ ತಡೆ ಬೀಳುವ ನಿರೀಕ್ಷೆ ಮತ್ತು ಆರ್ಥಿಕ ಚಟುವಟಿಕೆಗಳ ಕುರಿತು ಸಕಾರಾತ್ಮಕ ಭಾವನೆಯಿಂದಾಗಿ ಇಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ನ್ಯಾಷನಲ್ ಸೆಕ್ಯುರಿಟಿ ಡೆಪಾಸಿಟರಿ ಲಿಮಿಟೆಡ್ನಲ್ಲಿ (ಎನ್ಎಸ್ಡಿಎಲ್) ಇರುವ ಮಾಹಿತಿಯ ಪ್ರಕಾರ, ಅಕ್ಟೋಬರ್ನಲ್ಲಿ ₹ 8 ಕೋಟಿ ಹಾಗೂ ಸೆಪ್ಟೆಂಬರ್ನಲ್ಲಿ ₹ 7,624 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ನವೆಂಬರ್ನಲ್ಲಿ ಮತ್ತೆ ಹೂಡಿಕೆಗೆ ಗಮನ ನೀಡಿದ್ದಾರೆ. ಈ ವರ್ಷದಲ್ಲಿ ಈವರೆಗೆ ಒಟ್ಟು ₹ 1.37 ಲಕ್ಷ ಕೋಟಿ ಬಂಡವಾಳ ಹೊರಹರಿವು ಆಗಿದೆ.

ಜಾಗತಿಕ ಮಟ್ಟದ ರಾಜಕೀಯ ವಿದ್ಯಮಾನಗಳಿಂದಾಗಿ ಅಲ್ಪಾವಧಿಯಲ್ಲಿ ಎಫ್ಪಿಐ ಒಳಹರಿವು ಅಸ್ಥಿರವಾಗಿರುವ ನಿರೀಕ್ಷೆ ಇದೆ ಎಂದು ಕೋಟಕ್ ಸೆಕ್ಯುರಿಟೀಸ್ನ ಈಕ್ವಿಟಿ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.

ಭಾರತದ ಷೇರುಪೇಟೆಗಳಲ್ಲಿ ನಡೆಯುತ್ತಿರುವ ಉತ್ತಮ ವಹಿವಾಟಿನಿಂದಾಗಿ ನವೆಂಬರ್ನಲ್ಲಿ ಬಂಡವಾಳ ಒಳಹರಿವು ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಸ್ಥಿರವಾಗಿರುವುದು ಮತ್ತು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರತೆ ಕಂಡುಕೊಳ್ಳುತ್ತಿರುವುದು ಸಹ ಬಂಡವಾಳ ಒಳಹರಿವಿನ ಮೇಲೆ ಪ್ರಭಾವ ಬೀರಿವೆ ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.