ನವದೆಹಲಿ: ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಸಮೂಹದ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಫಾಕ್ಸ್ಕಾನ್ ಕಂಪನಿಯು, ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೆ ತಯಾರಿಕಾ ಯೋಜನೆಗೆ ಕೇಂದ್ರದಿಂದ ಉತ್ತೇಜನಕ್ಕೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

‘ಭಾರತದಲ್ಲಿ ಹಾಗೂ ಭಾರತದ ಆಚೆಗೆ ನಾವು ಬಹುಬಗೆಯ ಪಾಲುದಾರರನ್ನು ಬಯಸುತ್ತೇವೆ. ಭಾರತವು ಮುಂದಿನ ಹಂತಕ್ಕೆ ದಾಪುಗಾಲು ಇರಿಸುವುದನ್ನು ಆ ಪಾಲುದಾರರೂ ಬಯಸಬೇಕು. ಅಲ್ಲದೆ, ನಾವು ಹೊಂದಿರುವ ವಿಶ್ವದರ್ಜೆಯ ತಯಾರಿಕಾ ವ್ಯವಸ್ಥೆ ಹಾಗೂ ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಕೊಡುಗೆ ನೀಡುವವರಾಗಿರಬೇಕು’ ಎಂದು ಕಂಪನಿ ಮಂಗಳವಾರ ಹೇಳಿದೆ.

ವೇದಾಂತ ಜೊತೆಗಿನ ಪಾಲುದಾರಿಕೆಯಿಂದ ಹೊರಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಫಾಕ್ಸ್ಕಾನ್, ಇದು ಎರಡೂ ಕಂಪನಿಗಳು ಸಮ್ಮತಿಯೊಂದಿಗೆ ತೆಗೆದುಕೊಂಡಿರುವ ತೀರ್ಮಾನ ಎಂದು ಹೇಳಿದೆ. ‘ಹೊಸದೊಂದು ಪ್ರದೇಶದಲ್ಲಿ ಸೆಮಿಕಂಡಕ್ಟರ್ಗಳ ತಯಾರಿಕೆಯು ಸವಾಲಿನ ಕೆಲಸ. ಆದರೆ ನಾವು ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಬದ್ಧತೆ ಹೊಂದಿದ್ದೇವೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.