ನವದೆಹಲಿ: ನೈಸರ್ಗಿಕ ಅನಿಲದ ಬೆಲೆ ನಿಗದಿ ಸೂತ್ರವನ್ನು ಕೇಂದ್ರ ಸರ್ಕಾರ ಬದಲಾಯಿಸಿದ ಬೆನ್ನಲ್ಲೇ, ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯನ್ನು ಯೂನಿಟ್‌ಗೆ ₹ 7ರವರೆಗೆ ತಗ್ಗಿಸಿದೆ. ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಬೆಲೆ ಇಳಿಕೆಯು ಇತರೆಡೆಗಳಿಗಿಂತ ಹೆಚ್ಚು.

ರಾಜ್ಯದಲ್ಲಿ ಸಿಎನ್‌ಜಿ ಬೆಲೆಯು ಕೆ.ಜಿ.ಗೆ ₹ 7ರಷ್ಟು ಅಗ್ಗವಾಗಿದ್ದು, 82.50ಕ್ಕೆ ತಲುಪಿದೆ. ಸೋನಿಪತ್‌ನಲ್ಲಿಯೂ ಇಷ್ಟೇ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ. ಇತರ ಕಡೆಗಳಲ್ಲಿ ಸಿಎನ್‌ಜಿ ಬೆಲೆ ಇಳಿಕೆಯು ಕೆ.ಜಿ.ಗೆ ₹ 6ರಷ್ಟು ಆಗಿದೆ.

ಪಿಎನ್‌ಜಿ ಬೆಲೆಯನ್ನು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಯೂನಿಟ್‌ಗೆ ₹ 7ರಷ್ಟು ಇಳಿಸಲಾಗಿದೆ. ದೇಶದ ಇತರ ಕಡೆಗಳಲ್ಲಿ ಬೆಲೆ ಇಳಿಕೆಯು ಯೂನಿಟ್‌ಗೆ ₹ 6ರಷ್ಟು ಆಗಿದೆ. ಈ ಇಳಿಕೆಯ ನಂತರ ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಪಿಎನ್‌ಜಿ ಬೆಲೆಯು ಯೂನಿಟ್‌ಗೆ ₹ 51.50 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.