ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದ್ದ ಬೆಳ್ಳುಳ್ಳಿ ಧಾರಣೆಯು ಇಳಿಕೆಯತ್ತ ಸಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ವರ್ಷದ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿಯೇ ರಾಜ್ಯದ ವಿವಿಧ ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ದರವು ಏರಿಕೆಯಾಗಿತ್ತು. ಒಂದು ಕೆ.ಜಿ ಹೈಬ್ರೀಡ್ ಬೆಳ್ಳುಳ್ಳಿ ₹450 ಹಾಗೂ ನಾಟಿ ಬೆಳ್ಳುಳ್ಳಿ ದರವು ₹500 ದಾಟಿತ್ತು.

ಸದ್ಯ ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೈಬ್ರೀಡ್ ಬೆಳ್ಳುಳ್ಳಿಯ ಸಗಟು ಧಾರಣೆಯು ₹70ರಿಂದ ₹150ಕ್ಕೆ ಇಳಿಕೆಯಾಗಿದೆ. ‘ಎ’ ದರ್ಜೆಯ ಸರಕಿಗೆ ಮಾತ್ರವೇ ₹150 ದರವಿದೆ. ಹಾಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ದರವು ಕೆ.ಜಿಗೆ ₹250ಕ್ಕೆ ಇಳಿದಿದೆ.

ಆದರೆ, ಬೆಂಗಳೂರಿನ ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವೇ ಚಿಲ್ಲರೆ ವ್ಯಾಪಾರಿಗಳು ಈಗಲೂ ಕೆ.ಜಿಗೆ ₹300ಕ್ಕೆ ಮಾರಾಟ ಮಾಡುತ್ತಿದ್ದಾರೆ. ಉಳಿದೆಡೆ ಚಿಲ್ಲರೆ ಧಾರಣೆಯು ಗಣನೀಯವಾಗಿ ತಗ್ಗಿದೆ. ದಾಸ್ತಾನು ಇಟ್ಟುಕೊಂಡಿದ್ದ ಕೆಲವು ವ್ಯಾಪಾರಿಗಳು ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿಲ್ಲ ಎನ್ನುತ್ತಾರೆ ಸಗಟು ವ್ಯಾಪಾರಿಗಳು.

ಹೆಚ್ಚಿದ ಆವಕ:

ಯಶವಂತಪುರದ ಮಾರುಕಟ್ಟೆಯಿಂದ ಬೆಂಗಳೂರು ನಗರ ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರಿಗೂ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಅಲ್ಲದೆ, ಬೆಂಗಳೂರಿನ ಗಡಿ ಭಾಗದಲ್ಲಿರುವ ತಮಿಳುನಾಡಿನ ಪ್ರದೇಶಗಳಿಗೂ ಹೋಗುತ್ತದೆ.

‘ಮಾರುಕಟ್ಟೆಯಿಂದ ಈ ಪ್ರದೇಶಗಳಿಗೆ ಪ್ರತಿದಿನ ಸರಾಸರಿ 5 ಸಾವಿರ ಚೀಲದಷ್ಟು (ಪ್ರತಿ ಚೀಲ 50 ಕೆ.ಜಿ) ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಸೋಮವಾರದಂದು ಮಧ್ಯಪ್ರದೇಶದಿಂದ 12 ಸಾವಿರ ಚೀಲ ಆವಕವಾಗಿದೆ. ಸಗಟು ವ್ಯಾಪಾರಿಗಳ ಬಳಿ ಮಾರಾಟವಾಗದ ಇನ್ನೂ 7 ಸಾವಿರ ಚೀಲ ದಾಸ್ತಾನಿದೆ’ ಎಂದು ಬೆಂಗಳೂರಿನ ಗುಜರಾತ್ ಟ್ರೇಡರ್ಸ್‌ನ ವರ್ತಕ ಜುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯಪ್ರದೇಶದಲ್ಲಿ ಈಗ ಕೊಯ್ಲು ಆರಂಭವಾಗಿದ್ದು, ಆವಕ ಮತ್ತಷ್ಟು ಹೆಚ್ಚಳವಾಗಲಿದೆ. ಮುಂದಿನ ವಾರದೊಳಗೆ ಸಗಟು ದರವು ಕೆ.ಜಿಗೆ ₹100ರಿಂದ ₹120ಕ್ಕೆ ಸ್ಥಿರವಾಗಲಿದೆ. ಹಾಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲೂ ಧಾರಣೆ ಸ್ಥಿರವಾಗಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.