ಮುಂಬೈ: ಚಿನ್ನದ ಬಾಂಡ್‌ನ 11ನೇ ಕಂತು ಸೋಮವಾರ ಆರಂಭವಾಗಲಿದ್ದು ಶುಕ್ರವಾರ ಮುಕ್ತಾಯವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿಕೆ ದರವನ್ನು ಪ್ರತಿ ಗ್ರಾಂಗೆ ₹ 4,912 ನಿಗದಿ ಮಾಡಿದೆ. ಆನ್‌ಲೈನ್ ಮೂಲಕ ಬಾಂಡ್ ಖರೀದಿಗೆ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,862 ಇರಲಿದೆ. ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್‌ಬಿಐ ಬಾಂಡ್‌ಗಳನ್ನು ವಿತರಿಸಲಿದೆ.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನದ ಬಾಂಡ್ ಯೋಜನೆ ಜಾರಿಗೆ ತಂದಿದೆ. ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಆರ್‌ಬಿಐನ 2019–20ರ ವಾರ್ಷಿಕ ವರದಿಯ ಪ್ರಕಾರ, 2015ರ ನವೆಂಬರ್‌ನಲ್ಲಿ ಯೋಜನೆ ಜಾರಿಗೆ ಬಂದ ಬಳಿಕ ಇಲ್ಲಿಯವರೆಗೆ ಒಟ್ಟಾರೆ ₹ 9,652 ಕೋಟಿ ಸಂಗ್ರಹವಾಗಿದೆ. 2019–20ರಲ್ಲಿ ₹ 2,316 ಕೋಟಿ ಸಂಗ್ರಹವಾಗಿತ್ತು.

ವಿವರಗಳು ಹೀಗಿವೆ:

* ವಿತರಣೆ ದರ, ಆನ್‌ಲೈನ್:ಪ್ರತಿ ಗ್ರಾಂಗೆ ₹4,540

* ಆಫ್‌ಲೈನ್: ಪ್ರತಿಗ್ರಾಂಗೆ ₹4,590

* ಅವಧಿ: 8 ವರ್ಷ. ಅವಧಿ ಮುಗಿಯುವುದಕ್ಕೂ ಮುನ್ನ 5 ವರ್ಷಗಳ ಬಳಿಕ ನಗದೀಕರಿಸಬಹುದು

* ಹೂಡಿಕೆ: ಕನಿಷ್ಠ 1 ಗ್ರಾಂ, ಗರಿಷ್ಠ 400 ಗ್ರಾಂ

* ಹಿಂದೂ ಅವಿಭಕ್ತ ಕುಟುಂಬಕ್ಕೆ ಗರಿಷ್ಠ 4 ಕೆ.ಜಿ

* ಟ್ರಸ್ಟ್‌ಗಳಿಗೆ 20 ಕೆ.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.