ನವದೆಹಲಿ: ಜನಸಾಮಾನ್ಯರ ಮೇಲಿನ ತೆರಿಗೆ ಭಾರ ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ 12 ಮತ್ತು ಶೇ 18ರಷ್ಟು ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸುವ ಬಗ್ಗೆ ಸರಕು ಮತ್ತು ಸೇವಾ ತೆರಿಗೆ ಸರಳೀಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಯು ಶನಿವಾರ ಚರ್ಚಿಸಿದೆ.

ಅಲ್ಲದೆ, ಕೆಲವು ದುಬಾರಿ ಸರಕುಗಳಿಗೆ ಮತ್ತಷ್ಟು ತೆರಿಗೆ ಹೇರಲು ತೀರ್ಮಾನಿಸಿದೆ. ಈ ಬಗ್ಗೆ ಜಿಎಸ್ಟಿ ಮಂಡಳಿಗೆ ವರದಿ ಸಲ್ಲಿಸಲಿದೆ. ನವೆಂಬರ್ನಲ್ಲಿ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಸಮಿತಿಯ ಈ ಶಿಫಾರಸುಗಳ ಕುರಿತು ಚರ್ಚಿಸಲಾಗುತ್ತದೆ. ಅಲ್ಲಿ ಒಪ್ಪಿಗೆ ದೊರೆತ ಬಳಿಕ ಅನುಷ್ಠಾನಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜಿಎಸ್ಟಿ ದರ ಪರಿಷ್ಕರಣೆ ಮೂಲಕ ₹20 ಸಾವಿರ ಕೋಟಿ ವರಮಾನ ಹೆಚ್ಚಳಕ್ಕೆ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧ್ಯಕ್ಷತೆಯ ಆರು ಸಚಿವರ ಸಮಿತಿಯು ಮುಂದಾಗಿದೆ’ ಎಂದು ಹೇಳಿದ್ದಾರೆ.

100ಕ್ಕೂ ಸರಕುಗಳ ತೆರಿಗೆ ಇಳಿಕೆ:

ಶೇ 5 ಹಾಗೂ ಶೇ 12ರ ಸ್ಲ್ಯಾಬ್ನಲ್ಲಿ ಇರುವ ಜವಳಿ, ಕೈಮಗ್ಗ, ಕೃಷಿ ಉತ್ಪನ್ನ, ರಸಗೊಬ್ಬರ ಸೇರಿ 100ಕ್ಕೂ ಹೆಚ್ಚು ಸರಕುಗಳ ಮೇಲಿನ ತೆರಿಗೆ ಪರಿಷ್ಕರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಹೇರ್ ಡ್ರೈಯರ್, ಹೇರ್ ಕರ್ಲರ್ ಸೇರಿ ಪ್ರಸಾಧನ ಪರಿಕರಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ವಸ್ತುಗಳನ್ನು ಮತ್ತೆ ಶೇ 28ರ ಸ್ಲ್ಬ್ಯಾಬ್ಗೆ ಸೇರಿಸುವ ಕುರಿತು ಸಮಿತಿಯು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಮಿತಿಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇದ್ದಾರೆ.

ಯಾವುದೆಲ್ಲ ಇಳಿಕೆಗೆ ಶಿಫಾರಸು?

ನೀರಿನ ಬಾಟಲ್ ನೀರಿನ ಬಾಟಲ್ ಮೇಲಿನ ಜಿಎಸ್ಟಿ ತಗ್ಗಿಸುವ ಕುರಿತು ಚರ್ಚಿಸಲಾಗಿದೆ. ಸದ್ಯ ಪ್ಯಾಕ್ ಮಾಡಿದ 20 ಲೀಟರ್ ಹಾಗೂ ಅದಕ್ಕೂ ಹೆಚ್ಚು ಸಾಮರ್ಥ್ಯದ ಕುಡಿಯುವ ನೀರಿನ ಬಾಟಲ್ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ಇಳಿಸಲು ಸಮಿತಿಯು ಶಿಫಾರಸು ಮಾಡಲು ನಿರ್ಧರಿಸಿದೆ. ಬೈಸಿಕಲ್ ಬೈಸಿಕಲ್ಗಳು ಜನರ ದೈನಂದಿನ ಭಾಗವಾಗಿವೆ. ಆರೋಗ್ಯ ಸದೃಢತೆಗಾಗಿ ಇತ್ತೀಚೆಗೆ ಜನರು ಇವುಗಳ ಬಳಕೆಗೆ ಮೊರೆ ಹೋಗಿದ್ದಾರೆ. ಪ್ರಸ್ತುತ ₹10 ಸಾವಿರ ಮೌಲ್ಯಕ್ಕಿಂತ ಕಡಿಮೆ ವೆಚ್ಚದ ಬೈಸಿಕಲ್ಗಳ ಮೇಲೆ ಶೇ 12ರಷ್ಟು ತೆರಿಗೆ ಇದೆ. ಇದನ್ನು ಶೇ 5ರ ಸ್ಲ್ಯಾಬ್ ಪಟ್ಟಿಗೆ ಸೇರಿಸುವುದು ಸಮಿತಿಯ ಇರಾದೆ. ನೋಟ್ಬುಕ್ ಶಾಲಾ ಮತ್ತು ಕಾಲೇಜುಗಳಲ್ಲಿ ನೋಟ್ಬುಕ್ಗಳ ಬಳಕೆ ಹೆಚ್ಚು. ಪೋಷಕರ ಮೇಲಿನ ಆರ್ಥಿಕ ಹೊರೆ ಇಳಿಸುವ ನಿಟ್ಟಿನಲ್ಲಿ ಇವುಗಳ ಮೇಲಿನ ತೆರಿಗೆ ಕಡಿಮೆ ಮಾಡಲು ಸಮಿತಿ ಮುಂದಾಗಿದೆ. ಇವುಗಳ ಈಗಿರುವ ಶೇ 12ರಷ್ಟು ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಲು ಉದ್ದೇಶಿಸಿದೆ.

ಯಾವುದೆಲ್ಲ ಏರಿಕೆಗೆ ಶಿಫಾರಸು?

ದುಬಾರಿ ಶೂ ಯುವಜನರಿಗೆ ಪ್ರತಿಷ್ಠಿತ ಬ್ರ್ಯಾಂಡ್ಗಳ ದುಬಾರಿ ಶೂಗಳ ಮೇಲೆ ಕಡುಮೋಹ. ಜಿಎಸ್ಟಿ ವರಮಾನ ಹೆಚ್ಚಳದತ್ತ ದೃಷ್ಟಿ ನೆಟ್ಟಿರುವ ಸಮಿತಿಯು ಇಂತಹ ಶೂಗಳ ಮೇಲೆ ಮತ್ತಷ್ಟು ತೆರಿಗೆ ಭಾರ ಹೇರಲು ಮುಂದಾಗಿದೆ. ಪ್ರಸ್ತುತ ₹15 ಸಾವಿರಕ್ಕೂ ಹೆಚ್ಚು ಮೌಲ್ಯದ ಒಂದು ಜೊತೆ ಶೂಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಶೇ 28ರಷ್ಟಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಿದೆ. ಕೈಗಡಿಯಾರ ದುಬಾರಿ ಕೈಗಡಿಯಾರಗಳು ಪ್ಯಾಷನ್ ಪ್ರಿಯರ ಅಚ್ಚುಮೆಚ್ಚು. ಇತ್ತೀಚೆಗೆ ಇಂತಹ ಗಡಿಯಾರಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ಸದ್ಯ ₹25 ಸಾವಿರಕ್ಕೂ ಹೆಚ್ಚು ಮೌಲ್ಯದ ಕೈಗಡಿಯಾರಗಳು ಶೇ 18ರ ತೆರಿಗೆ ಸ್ಲ್ಯಾಬ್ನಲ್ಲಿವೆ. ಇವುಗಳನ್ನು ಶೇ 28ರ ಸ್ಲ್ಯಾಬ್ಗೆ ಸೇರಿಸಲು ಸಮಿತಿ ಚರ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.