ನವದೆಹಲಿ:ಜಿಮೇಲ್ ಖಾತೆಗಳನ್ನುಓದಲು ಮೂರನೇ ವ್ಯಕ್ತಿಗಳಿಗೂಇಂಟರ್ನೆಟ್ ಹುಡುಕು ತಾಣ ಗೂಗಲ್ ಅವಕಾಶ ಮಾಡಿಕೊಟ್ಟಿದೆ.

ನೂರಕ್ಕೂ ಹೆಚ್ಚು ಸಾಫ್ಟ್ವೇರ್ ಅಭಿವೃದ್ದಿ ಪಡಿಸುವ ಹೊರ ಗುತ್ತಿಗೆ ಕಂಪೆನಿಗಳಿಗೆಗೂಗಲ್ ಜಿಮೇಲ್ ಇನ್ ಬಾಕ್ಸ್ ಸ್ಕ್ಯಾನ್ ಮಾಡುವ ಗುತ್ತಿಗೆ ನೀಡಿದೆ. ಈ ವೇಳೆ ಶಾಪಿಂಗ್ ದರಗಳು, ಪ್ರಯಾಣದ ವಿವರಗಳಿರುವ ಜಾಹೀರಾತುಗಳು ಜಿಮೇಲ್ ಖಾತೆದಾರರ ಇನ್ ಬಾಕ್ಸ್ನಲ್ಲಿ ಕಾಣಲಿವೆ ಎಂದು ಗೂಗಲ್ ಸೋಮವಾರ ವರದಿ ಮಾಡಿದೆ.

ಜಾಗತಿಕವಾಗಿ ಜಿಮೇಲ್ ಅನ್ನು 1.4 ನೂರು ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಮೇಲ್ ಸೇವೆ ಒದಗಿಸುವ ಇತರೆ 25 ಕಂಪೆನಿಗಳಿಗಿಂತಲೂ ಜಿಮೇಲ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಕೆಲವು ಸಂದರ್ಭಗಳಲ್ಲಿ ಮಾತ್ರ ಜಿಮೇಲ್ಗಳನ್ನು ಓದಲು ಅವಕಾಶ ಮಾಡಿಕೊಡಲಾಗಿದೆ. ಬಳಕೆದಾರರ ಖಾತೆಗಳಲ್ಲಿ ಬಗ್ ಅಥವಾ ತಾಂತ್ರಿಕ ಸಮಸ್ಯೆಗಳು ಕಂಡು ಬಂದಾಗ ಮಾತ್ರ ಅದನ್ನು ಸರಿಪಡಿಸುವಲ್ಲಿ ಮೇಲ್ಗಳನ್ನು ಓದಲು ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯ ಮೇಲ್ಗಳನ್ನು ಓದುವ ಮುನ್ನ ಬಳಕೆದಾರರ ಅನುಮತಿ ಪಡೆಯಬೇಕು ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಗೂಗಲ್ ಕಂಪೆನಿಯ ನೌಕರರು ಕೂಡ ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಕೆದಾರರ ಮೇಲ್ಗಳನ್ನು ಓದುತ್ತಿದ್ದರು. ಇದೀಗ ಹೊರ ಗುತ್ತಿಗೆಯ ಮೂರನೇ ವ್ಯಕ್ತಿಗಳಿಗೂ ಮೇಲ್ಗಳನ್ನು ಓದುವ ಅವಕಾಶ ಮಾಡಿಕೊಡಲಾಗಿದೆ.

ಇತ್ತೀಚಿಗಷ್ಟೆ ಗೂಗಲ್ ಜಿಮೇಲ್ ಖಾತೆದಾರರ ಮಾಹಿತಿ ಸೋರಿಕೆಯಾಗದಂತೆ ಸುರಕ್ಷತೆಯ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.