ನವದೆಹಲಿ: ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ 2020–21ನೇ ಸಾಲಿಗೆ ಶೇಕಡ 8.5ರಷ್ಟು ಬಡ್ಡಿ ನೀಡಲು ಕೇಂದ್ರ ಸರ್ಕಾರವು ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಐದು ಕೋಟಿಗೂ ಹೆಚ್ಚಿನ ಚಂದಾದಾರರಿಗೆ ಇದರಿಂದಾಗಿ ದೀಪಾವಳಿ ಹೊತ್ತಿನಲ್ಲಿ ಸಂತಸದ ಸುದ್ದಿ ಸಿಕ್ಕಂತಾಗಿದೆ.

ಪಿ.ಎಫ್. ಠೇವಣಿಗೆ ಶೇ 8.5ರಷ್ಟು ಬಡ್ಡಿ ಕೊಡಬೇಕು ಎಂಬ ತೀರ್ಮಾನವನ್ನು ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿಯು ಮಾರ್ಚ್ ತಿಂಗಳಿನಲ್ಲಿ ಕೈಗೊಂಡಿತ್ತು. ‘ಈ ತೀರ್ಮಾನಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ. ಬಡ್ಡಿಯ ಮೊತ್ತವು ಚಂದಾದಾರರ ಖಾತೆಗಳಿಗೆ ಜಮಾ ಆಗಲಿದೆ’ ಎಂದು ಮೂಲಗಳು ಹೇಳಿವೆ.

ಇಪಿಎಫ್ಒ 2016–17ರಲ್ಲಿ ಶೇ 8.65ರಷ್ಟು, 2017–18ರಲ್ಲಿ ಶೇ 8.55ರಷ್ಟು ಬಡ್ಡಿ ನೀಡಿತ್ತು. 2015–16ರಲ್ಲಿ ಶೇ 8.8ರಷ್ಟು ಬಡ್ಡಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.