ನವದೆಹಲಿ: ಸಂಸ್ಕರಿಸಿದ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 17.5ರಿಂದ ಶೇ 12.5ಕ್ಕೆ ಇಳಿಕೆ ಮಾಡಲಾಗಿದೆ.

ದೇಶದಲ್ಲಿ ಅಡುಗೆ ಎಣ್ಣೆ ಲಭ್ಯತೆ ಸುಧಾರಿಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪರಿಷ್ಕರಣೆಯಿಂದಾಗಿ ಸಂಸ್ಕರಿಸಿದ ಅಡುಗೆ ಎಣ್ಣೆಗಳ ಮೇಲಿನ ಸುಂಕವು ಶೇ 13.7ರಷ್ಟು ಆಗಿದೆ (ಸಮಾಜ ಕಲ್ಯಾಣ ಸೆಸ್ ಒಳಗೊಂಡು).

ಸಾಮಾನ್ಯವಾಗಿ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಕಚ್ಚಾ ರೂಪದಲ್ಲಿ ಭಾರತವು ಆಮದು ಮಾಡಿಕೊಳ್ಳುತ್ತದೆ; ಸಂಸ್ಕರಿಸಿದ ರೂಪದಲ್ಲಿ ಅಲ್ಲ. ಆದರೆ, ಸರ್ಕಾರವು ಸಂಸ್ಕರಿಸಿದ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ.

ಈ ಕ್ರಮದಿಂದಾಗಿ ದೇಶದ ಮಾರುಕಟ್ಟೆಯಲ್ಲಿ ಒಂದಷ್ಟುಮಟ್ಟಿಗೆ ತಾತ್ಕಾಲಿಕವಾಗಿ ಪ್ರಯೋಜನ ಆಗಲಿದೆಯಾದರೂ, ಅದು ಆಮದನ್ನು ಉತ್ತೇಜಿಸುವ ಸಾಧ್ಯತೆ ಕಡಿಮೆ ಎಂದು ಸಾಲ್ವೆಂಟ್ ಎಕ್ಸ್ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಸ್ಇಎ) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.

ಸದ್ಯ, ಸಂಸ್ಕರಿಸಿದ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಆಗಿಲ್ಲ. ಈ ಬಾರಿ ಮುಂಗಾರು ವಾಡಿಕೆಯಂತೆ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಹೀಗಿದ್ದರೂ ಎಲ್ ನಿನೊ ಪರಿಣಾಮವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಅದು ಮುಂಗಾರಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದು, ಮುಂಗಾರು ಬೆಳೆಗಳಿಗೆ ಹಾನಿ ಮಾಡಬಹುದು. 2023–24ರಲ್ಲಿ ಅಡುಗೆ ಎಣ್ಣೆಗಳ ಲಭ್ಯತೆಯನ್ನು ಕಡಿಮೆ ಮಾಡಬಹುದು ಎಂಂದು ಮೆಹ್ತಾ ತಿಳಿಸಿದ್ದಾರೆ.

ಭಾರತವು ದೇಶಿ ಬೇಡಿಕೆಯ ಅಡುಗೆ ಎಣ್ಣೆಯ ಶೇ 60ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ.

ತಾಳೆ ಎಣ್ಣೆ ಆಮದು ಇಳಿಕೆ: ತಾಳೆ ಎಣ್ಣೆ ಆಮದು ಮೇನಲ್ಲಿ ಶೇ 14.59ರಷ್ಟು ಇಳಿಕೆ ಕಂಡು 4.39 ಲಕ್ಷ ಟನ್ಗಳಿಗೆ ತಲುಪಿದೆ. ಆದರೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಎಸ್ಇಎ ಹೇಳಿದೆ.

2022ರ ಮೇ ತಿಂಗಳಲ್ಲಿ 5.14 ಲಕ್ಷ ಟನ್ ತಾಣೆ ಎಣ್ಣೆ ಆಮದಾಗಿತ್ತು. ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು 1.18 ಲಕ್ಷ ಟನ್ನಿಂದ 2.95 ಲಕ್ಷ ಟನ್ಗಳಿಗೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.