ನವದೆಹಲಿ: ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರವು ಸೋಮವಾರ ಗೋಧಿ ದಾಸ್ತಾನಿಗೆ ಮಿತಿ ಹೇರಿದೆ.

ಸಗಟು ಮಾರಾಟಗಾರರು 3,000 ಟನ್, ಚಿಲ್ಲರೆ ಮತ್ತು ದೊಡ್ಡ ಮಾರಾಟಗಾರರು ಪ್ರತಿ ಚಿಲ್ಲರೆ ಮಳಿಗೆಗೆ 10 ಟನ್, ಡಿಪೊಗಳು 3,000 ಟನ್, ಸಂಸ್ಕರಣಾಗಾರವು ತಿಂಗಳ ಸಾಮರ್ಥ್ಯದ ಶೇ 70ರಷ್ಟನ್ನು ದಾಸ್ತಾನು ಮಾಡಿಕೊಳ್ಳಬಹುದಾಗಿದೆ. ಈ ದಾಸ್ತಾನು ಮಿತಿ ಆದೇಶವು 2025ರ ಮಾರ್ಚ್ 31ರ ವರೆಗೆ ಇರಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.

ಗೋಧಿ ರಫ್ತು ಮೇಲಿನ ನಿರ್ಬಂಧವನ್ನು ತೆಗೆದುಹಾಕಿಲ್ಲ. ಬೆಲೆ ನಿಯಂತ್ರಣದಲ್ಲಿಡಲು ಅಗತ್ಯವಿದ್ದಲ್ಲಿ ಆಹಾರ ಧಾನ್ಯದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದೆ.

ಪ್ರಸ್ತುತ ಗೋಧಿ ಆಮದು ಮೇಲೆ ಶೇ 40ರಷ್ಟು ಸುಂಕ ವಿಧಿಸಲಾಗುತ್ತಿದೆ.

2024–25ರ ಮಾರುಕಟ್ಟೆ ವರ್ಷದ (ಏಪ್ರಿಲ್–ಮಾರ್ಚ್) ಜೂನ್ 18ರ ವರೆಗೆ 266 ಲಕ್ಷ ಟನ್ ಗೋಧಿ ಸಂಗ್ರಹಿಸಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 262 ಲಕ್ಷ ಟನ್ ಸಂಗ್ರಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.