ನವದೆಹಲಿ: ಇಫ್ಕೊ ಸಂಸ್ಥೆಯ ಸಹಯೋಗದಡಿ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್ ತಯಾರಿಕೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದು ನ್ಯಾನೊ ಯೂರಿಯಾದ ಸುಧಾರಿತ ಮಾದರಿಯಾಗಿದೆ. ಇದರಲ್ಲಿ ಶೇ 16ರಷ್ಟು ಸಾರಜನಕ ಅಂಶವಿದ್ದು, ಬೆಳೆಗಳಿಗೆ ನಿರ್ಣಾಯಕ ಹಂತದಲ್ಲಿ ಬೇಕಾದ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಮುಂದಿನ ಮೂರು ವರ್ಷ ಇಫ್ಕೊ ಇದನ್ನು ತಯಾರಿಸಲಿದೆ ಎಂದು ತಿಳಿಸಿದೆ.

ಸಾಂಪ್ರದಾಯಿಕ ರಸಗೊಬ್ಬರ ಹಾಗೂ ಇತರೆ ಸಾರಜನಕಯುಕ್ತ ಗೊಬ್ಬರಕ್ಕೆ ಪರ್ಯಾಯವಾಗಿ ರೈತರು ಇದನ್ನು ಬಳಸಬಹುದಾಗಿದೆ. ಈ ಗೊಬ್ಬರವು ಮಣ್ಣಿನ ಆರೋಗ್ಯವನ್ನು ಕಾಪಾಡುವ ಜೊತೆಗೆ ರೈತರಿಗೆ ಲಾಭದಾಯಕವಾಗಲಿದೆ ಎಂದು ಹೇಳಿದೆ.

‘ಈ ಗೊಬ್ಬರವು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಕಾಪಾಡುತ್ತದೆ. ಜೊತೆಗೆ, ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಲಭ್ಯತೆ ಮತ್ತು ಅದರ ಪರಿಣಾಮಗಳನ್ನು ಹೆಚ್ಚಿಸಲಿದೆ. ಸಸ್ಯಗಳ ಎಲೆಗಳಲ್ಲಿ ಪತ್ರ ಹರಿತ್ತು (ಕ್ಲೋರೋಫಿಲ್) ಉತ್ಪತ್ತಿ ಹಾಗೂ ಇಳುವರಿ ಹೆಚ್ಚಳಕ್ಕೆ ನೆರವಾಗಲಿದೆ’ ಎಂದು ಇಫ್ಕೊದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಯು.ಎಸ್. ಅವಸ್ಥಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಗುಜರಾತ್‌ನ ಕಲೋಲ್, ಉತ್ತರ ಪ್ರದೇಶದ ಅಒನ್ಲಾ ಮತ್ತು ಫೂಲ್ಪುರ್ ಘಟಕಗಳಲ್ಲಿ ಶೀಘ್ರವೇ ತಯಾರಿಕೆ ಆರಂಭಿಸಲಾಗುತ್ತದೆ ಎಂದು ಇಫ್ಕೊ ತಿಳಿಸಿದೆ.

ಇಡೀ ವಿಶ್ವದಲ್ಲಿಯೇ ಮೊದಲ ಬಾರಿಗೆ 2021ರ ಜೂನ್‌ನಲ್ಲಿ ಇಫ್ಕೊದಿಂದ ದ್ರವರೂಪದ ನ್ಯಾನೊ ಯೂರಿಯಾ ತಯಾರಿಗೆ ಚಾಲನೆ ನೀಡಲಾಗಿತ್ತು. 2023ರಲ್ಲಿ ನ್ಯಾನೊ ಡಿಎಪಿ ಉತ್ಪಾದನೆ ಆರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.