ನವದೆಹಲಿ: ದೇಶದಲ್ಲಿ 2023–24ರ ರಾವಿ ಋತುವಿನಲ್ಲಿ ಚೆನ್ನಂಗಿ ಬೇಳೆ (ಮಸೂರ್ ದಾಲ್) ಉತ್ಪಾದನೆಯು 1.6 ದಶಲಕ್ಷ ಟನ್ ದಾಟುವ ನಿರೀಕ್ಷೆಯಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಅಂದಾಜಿಸಿದೆ.

2022–23ರಲ್ಲಿ ಒಟ್ಟು 1.55 ದಶಲಕ್ಷ ಟನ್ ಉತ್ಪಾದನೆಯಾಗಿತ್ತು.

ಜಾಗತಿಕವಾಗಿ ಅತಿಹೆಚ್ಚು ಪ್ರಮಾಣದಲ್ಲಿ ದ್ವಿದಳಧಾನ್ಯಗಳ ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತವೂ ಒಂದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ತಲೆದೋರಿದ ವೇಳೆ ಚೆನ್ನಂಗಿ ಬೇಳೆ ಮತ್ತು ತೊಗರಿ ಬೇಳೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಶುಕ್ರವಾರ ನಡೆದ ಜಾಗತಿಕ ದ್ವಿದಳಧಾನ್ಯಗಳ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ‘ಈ ಬಾರಿ ಚೆನ್ನಂಗಿ ಬೇಳೆ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಹಾಗಾಗಿ, ಉತ್ಪಾದನೆಯೂ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ದ್ವಿದಳಧಾನ್ಯಗಳ ವಾರ್ಷಿಕ ಸರಾಸರಿ ಉತ್ಪಾದನೆ 26ರಿಂದ 27 ದಶಲಕ್ಷ ಟನ್‌ನಷ್ಟಿದೆ. ಕಡಲೆ ಕಾಳು ಮತ್ತು ಹೆಸರು ಕಾಳು ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಿದೆ. ಆದರೆ, ಚೆನ್ನಂಗಿ ಬೇಳೆ ಮತ್ತು ತೊಗರಿ ಬೇಳೆ ಕೊರತೆಯಾದಾಗ ಆಮದಿನ ಮೊರೆ ಹೋಗುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಕೇಂದ್ರ ಕೃಷಿ ಸಚಿವಾಲಯದ ಅಂಕಿಅಂಶದ ಪ್ರಕಾರ ಹಿಂದಿನ ವರ್ಷ 1.83 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಚೆನ್ನಂಗಿ ಬೇಳೆ ಬಿತ್ತನೆಯಾಗಿತ್ತು. ಈ ಬಾರಿ 1.94 ದಶಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.