ನವದೆಹಲಿ: ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನ ಸಂಗ್ರಹದಲ್ಲಿ ಇರುವ ತೊಗರಿ ಬೇಳೆಯನ್ನು ಅರ್ಹ ಮಿಲ್‌ಗಳಿಗೆ ಮಾರಾಟ ಮಾಡಲಿದೆ.

‘ಆಮದು ತೊಗರಿ ಬೇಳೆಯು ದೇಶದ ಮಾರುಕಟ್ಟೆಯನ್ನು ತಲುಪುವವರೆಗೆ ಕೇಂದ್ರವು ತನ್ನ ಸಂಗ್ರಹದಲ್ಲಿನ ತೊಗರಿ ಬೇಳೆಯನ್ನು ಬಿಡುಗಡೆ ಮಾಡಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ಆನ್‌ಲೈನ್ ಹರಾಜು ಮೂಲಕ ತೊಗರಿ ಬೇಳೆಯನ್ನು ಮಾರಾಟ ಮಾಡುವಂತೆ ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಹಾಗೂ ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳಕ್ಕೆ (ಎನ್‌ಸಿಸಿಎಫ್) ಸೂಚನೆ ನೀಡಿದೆ ಎಂದು ಕೂಡ ಅದು ತಿಳಿಸಿದೆ.

ತೊಗರಿ ಬೇಳೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅದರಿಂದಾಗಿ ಗ್ರಾಹಕರಿಗೆ ತೊಗರಿಬೇಳೆಯು ಎಷ್ಟರಮಟ್ಟಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಯಿತು ಎಂಬುದನ್ನು ಆಧರಿಸಿ ಮುಂದೆ ಎಷ್ಟು ಪ್ರಮಾಣದಲ್ಲಿ ಹಾಗೂ ಎಷ್ಟು ದಿನಗಳಿಗೆ ಒಮ್ಮೆ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ.

ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ, ಉದ್ದಿನಬೇಳೆ ಹಾಗೂ ತೊಗರಿ ಬೇಳೆಯ ದಾಸ್ತಾನಿನ ಮೇಲೆ ಈಗಾಗಲೇ ಮಿತಿ ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.