ಬೆಳಗಾವಿಯ ರೈತರು ಮೀರಜ್, ಸಾಂಗ್ಲಿ, ಆಂಧ್ರಪ್ರದೇಶ ಮಾರುಕಟ್ಟೆಗೆ ದ್ರಾಕ್ಷಿ ಕಳುಹಿಸುತ್ತಿದ್ದರು. ಮಹಾರಾಷ್ಟ್ರ, ಆಂಧ್ರದಲ್ಲಿ ಈ ಬಾರಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗಿದೆ. ಹಾಗಾಗಿ,ಜಿಲ್ಲೆಯಲ್ಲಿ ಬೆಳೆದಿರುವ ದ್ರಾಕ್ಷಿಗೆ ಬೇಡಿಕೆ ಕುಸಿದಿದೆ
ಮಹಾಂತೇಶ ಮುರಗೋಡ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಳಗಾವಿ
ದ್ರಾಕ್ಷಿ ಬೆಳೆಗಾರರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಔಷಧ ಮುಕ್ತವಾಗಿ ಬೆಳೆಯಬೇಕು. ಸರ್ಕಾರವೂ ಸಾವಯವ ದ್ರಾಕ್ಷಿ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹಿಸಬೇಕು
ಅಭಯಕುಮಾರ್ ನಾಂದ್ರೇಕೇರ, ಅಧ್ಯಕ್ಷ, ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ
ಮಿತಿಮೀರಿ ರಾಸಾಯನಿಕ ಬಳಕೆಯಿಂದ ಬೆಳೆಯುವವರೇ ದ್ರಾಕ್ಷಿ ತಿನ್ನುತ್ತಿಲ್ಲ. ಸಂಬಂಧಿಕರು, ಪರಿಚಯಸ್ಥರಿಗೂ ತಿನ್ನಬೇಡಿ ಎಂದು ಹೇಳುತ್ತಾರೆ. ದ್ರಾಕ್ಷಿ ಸೇವನೆಯಿಂದ ಜನ ವಿಮುಖರಾಗುತ್ತಿದ್ದಾರೆ