ನವದೆಹಲಿ: ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಮತ್ತು ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಗಳು ಕೆಲವು ಬ್ರ್ಯಾಂಡ್‌ನ ಸೋಪುಗಳ ಬೆಲೆಯನ್ನು ಶೇಕಡ 15ರವರೆಗೂ ಇಳಿಕೆ ಮಾಡಿವೆ. ತಾಳೆ ಎಣ್ಣೆ ಮತ್ತು ಇತರೆ ಕಚ್ಚಾ ಸಾಮಗ್ರಿಗಳ ಬೆಲೆಯು ಇಳಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿವೆ.

ಗೋದ್ರೆಜ್ ನಂ. 1 ಸೋಪಿನ ಬೆಲೆ ಶೇ 13ರಿಂದ ಶೇ 15ರವರೆಗೆ ಇಳಿಕೆ ಆಗಿದೆ.ಗೋದ್ರೆಜ್ ನಂ. 1 ಸೋಪಿನ 100 ಗ್ರಾಂನ 5 ಸೋಪು ಒಳಗೊಂಡ ಪ್ಯಾಕ್‌ನ ಬೆಲೆ ₹ 140ರಿಂದ ₹ 120ಕ್ಕೆ ಇಳಿಕೆ ಮಾಡಲಾಗಿದೆ ಎಂದು ಗೋದ್ರೆಜ್ ಕಂಪನಿಯ ಸಿಎಫ್‌ಒ ಸಮೀಕರ್ ಶಾ ತಿಳಿಸಿದ್ದಾರೆ.

ಎಚ್‌ಯುಎಲ್ ಕಂಪನಿಯು ಲೈಫ್‌ಬಾಯ್ ಮತ್ತು ಲಕ್ಸ್ ಬ್ರ್ಯಾಂಡ್‌ನ ಸೋಪುಗಳ ಬೆಲೆಯನ್ನು ಪಶ್ಚಿಮದ ಪ್ರದೇಶಗಳಲ್ಲಿ ಶೇ 5 ರಿಂದ ಶೇ 11ರವರೆಗೆ ಇಳಿಕೆ ಮಾಡಿದೆ.

ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಒಟ್ಟಾರೆ ಬೇಡಿಕೆಯು ಇಳಿಮುಖವಾಗಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಮಾರಾಟದ ಪ್ರಮಾಣ ಹೆಚ್ಚಾಗಲು ಬೆಲೆ ಇಳಿಕೆಯು ನೆರವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.