ನವದೆಹಲಿ: ದ್ರವರೂಪದ ನ್ಯಾನೊ ರಸಗೊಬ್ಬರ ಬಳಸುವಂತೆ ರೈತರಲ್ಲಿ ಅರಿವು ಮೂಡಿಸಲು ದೇಶದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಫ್ಕೊ ತಿಳಿಸಿದೆ.

‘ನ್ಯಾನೊ ರಸಗೊಬ್ಬರ ಬಳಕೆ ಪ್ರಚಾರ ಮಹಾಅಭಿಯಾನ’ದ ಹೆಸರಿನಡಿ 200 ಮಾದರಿ ಗ್ರಾಮಗಳ ಗುಂಪು ರಚಿಸಲಾಗುವುದು. ಈ ಮೂಲಕ 800 ಹಳ್ಳಿಗಳಲ್ಲಿ ರಸಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುವುದು. ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್ ಹಾಗೂ ಯೂರಿಯಾದ ಗರಿಷ್ಠ ಮಾರಾಟ ದರದಲ್ಲಿ ರೈತರಿಗೆ ಶೇ 25ರಷ್ಟು ಸಬ್ಸಿಡಿ ದೊರೆಯಲಿದೆ’ ಎಂದು ತಿಳಿಸಿದೆ.

ನ್ಯಾನೊ ರಸಗೊಬ್ಬರ ಸಿಂಪಡಣೆಗೆ ಸಂಬಂಧಿಸಿದಂತೆ ಆಧುನಿಕ ತಾಂತ್ರಿಕತೆ ಅಳವಡಿಕೆಗೆ ಪ್ರೋತ್ಸಾಹ ನೀಡಲಾಗುವುದು. ಪ್ರಾತ್ಯಕ್ಷಿಕೆಗಳ ಮೂಲಕ ರೈತರಲ್ಲಿ ಅರಿವು ಮೂಡಿಸಲಾಗುವುದು. ರಸಗೊಬ್ಬರ ಸಿಂಪಡಿಸುವ ಡ್ರೋನ್ ಬಳಕೆದಾರರಿಗೆ ಪ್ರತಿ ಎಕರೆಗೆ ₹100 ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.