ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್ನ ಅಧಿಕಾರಿಗಳು, ಪ್ರವರ್ತಕ ಪವನ್ ಮುಂಜಾಲ್ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ (ಐ.ಟಿ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೇ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಅವರಿಗೆ ಸೇರಿದ ಗುರುಗ್ರಾಮದಲ್ಲಿರುವ ಕಚೇರಿ, ನಿವಾಸ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಐ.ಟಿ ಶೋಧ ಕಾರ್ಯ ನಡೆದಿರುವುದಾಗಿ ವರದಿಯಾಗಿದೆ.

ಹೀರೊ ಮೋಟೊಕಾರ್ಪ್ ಸಂಸ್ಥೆಯು ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ 40 ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಭಾರತದಲ್ಲಿ 6 ತಯಾರಿಕಾ ಘಟಕಗಳು, ಬಾಂಗ್ಲಾದೇಶ ಮತ್ತು ಕೊಲಂಬಿಯಾದಲ್ಲಿ ತಲಾ ಒಂದು ಘಟಕಗಳಲ್ಲಿ ವಾಹನಗಳನ್ನು ತಯಾರಿಸುತ್ತಿದೆ.

ದೇಶದ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾಗಿರುವ ಹೀರೊ ಮೋಟೊಕಾರ್ಪ್, ಸ್ಥಳೀಯ ಮಾರುಕಟ್ಟೆಯಲ್ಲಿ ಶೇಕಡ 50ರಷ್ಟು ಪಾಲುದಾರಿಕೆಯ ಮೂಲಕ ಪ್ರಾಬಲ್ಯ ಸಾಧಿಸಿದೆ.

ಉತ್ತರ ಭಾರತದ ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ 45 ಸ್ಥಳಗಳಲ್ಲಿ ಇತ್ತೀಚೆಗೆ ಐ.ಟಿ ಇಲಾಖೆ ದಾಳಿ ನಡೆಸಿತ್ತು. ದೆಹಲಿ–ಎನ್ಸಿಆರ್, ಚಂಡೀಗಡ, ಲೂಧಿಯಾನಾ, ಲಖನೌ ಹಾಗೂ ಇಂದೋರ್ನಲ್ಲಿ ಹುಡುಕಾಟ ನಡೆಸಿ, ಲೆಕ್ಕ ತೋರಿಸದ ₹25 ಕೋಟಿ ಹಣ ಮತ್ತು ₹5 ಕೋಟಿ ಮೌಲ್ಯದ ಆಭರಣಗಳನ್ನು ಇಲಾಖೆ ವಶಪಡಿಸಿಕೊಂಡಿತ್ತು. ಅದರ ಬೆನ್ನಲ್ಲೇ ಈ ಶೋಧ ಕಾರ್ಯಾಚರಣೆ ನಡೆದಿರುವುದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.