ನವದೆಹಲಿ: ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸಸ್ ಸಂಸ್ಥೆಯು ಭಾರತಕ್ಕೆ ನೀಡಿರುವ ರೇಟಿಂಗ್ಅನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಕೇಂದ್ರ ಸರ್ಕಾರವು ಸಂಸ್ಥೆಯ ಅಧಿಕಾರಿಗಳ ಮನವೊಲಿಸುವ ಯತ್ನ ನಡೆಸಿದೆ ಎಂದು ಮೂಲಗಳು ಹೇಳಿವೆ.

ಮೂಡಿಸ್ ರೇಟಿಂಗ್‌ನ ವಾರ್ಷಿಕ ಪರಿಶೀಲನೆ ಶೀಘ್ರವೇ ನಡೆಯಲಿದೆ. ಇದಕ್ಕೆ ಮೊದಲು ಮೂಡಿಸ್ ಪ್ರತಿನಿಧಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ದೇಶದ ರೇಟಿಂಗ್ ಮೇಲ್ದರ್ಜೆಗೆ ಬಂದರೆ, ದೇಶಕ್ಕೆ ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗುತ್ತದೆ.

‘ದೇಶದ ಅರ್ಥ ವ್ಯವಸ್ಥೆಯ ಶಕ್ತಿಯನ್ನು ಮೂಡಿಸ್ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ನಮ್ಮ ರೇಟಿಂಗ್ ಮೇಲ್ದರ್ಜೆಗೆ ಏರಿಕೆ ಆಗುತ್ತದೆ ಎಂಬ ನಿರೀಕ್ಷೆ ಇದೆ’ ಎಂದು ಅಧಿಕಾರಿಯೊಬ್ಬರು ಭೇಟಿಯ ನಂತರ ತಿಳಿಸಿದ್ದಾರೆ. ಮೂಡಿಸ್ ಸಂಸ್ಥೆಯು ಭಾರತಕ್ಕೆ ‘ಬಿಎಎ3’ ರೇಟಿಂಗ್ ನೀಡಿದೆ. ಇದು ಹೂಡಿಕೆ ದರ್ಜೆಯಲ್ಲಿ ಅತ್ಯಂತ ಕಡಿಮೆ ಮಟ್ಟದ ರೇಟಿಂಗ್.

ಜಗತ್ತಿನ ಪ್ರಮುಖ ರೇಟಿಂಗ್ ಸಂಸ್ಥೆಗಳಾದ ಫಿಚ್, ಎಸ್‌ಆ್ಯಂಡ್‌ಪಿ ಮತ್ತು ಮೂಡಿಸ್ ಭಾರತಕ್ಕ ಹೂಡಿಕೆ ದರ್ಜೆಯಲ್ಲಿ ಅತ್ಯಂತ ಕಡಿಮೆ ಮಟ್ಟದ ರೇಟಿಂಗ್ ನೀಡಿವೆ. ದೇಶವು ಸಾಲ ಪಡೆಯಲು ಎಷ್ಟರಮಟ್ಟಿಗೆ ಅರ್ಹವಾಗಿದೆ ಎಂಬುದನ್ನು ಈ ರೇಟಿಂಗ್ ನೋಡಿ ಹೂಡಿಕೆದಾರರು ತೀರ್ಮಾನಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.