ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಮಗ್ಗಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ: ಧನಕರ್

Published 7 ಆಗಸ್ಟ್ 2024, 15:59 IST
Last Updated 7 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ‘ಮುಂದಿನ ಎರಡು ವರ್ಷದಲ್ಲಿ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹೇಳಿದರು.

ಬುಧವಾರ ನಡೆದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಮಗ್ಗಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ವೋಕಲ್‌ ಫಾರ್ ಲೋಕಲ್‌’ ಕರೆಯು ಈ ವಲಯದ ಆರ್ಥಿಕ ಬಲವರ್ಧನೆಗೆ ನೆರವಾಗಿದೆ. ದೇಶದ ಜನತೆ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಪ್ರತಿಜ್ಞೆ ಮಾಡಬೇಕಿದೆ. ಇದರಿಂದ ಮಾರಾಟದ ಪ್ರಮಾಣವು ಏರಿಕೆಯಾಗಲಿದೆ ಎಂದು ಹೇಳಿದರು.

ವಿದೇಶಿ ವಿನಿಮಯ ಉಳಿತಾಯ, ಉದ್ಯೋಗ ಸೃಷ್ಟಿ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವುದು ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

‘34 ವರ್ಷದ ಹಿಂದೆ ನಾನು ಲೋಕಸಭೆ ಪ್ರವೇಶಿಸಿದಾಗ ದೇಶದ ಆರ್ಥಿಕತೆಯ ಗಾತ್ರವು ಲಂಡನ್‌ ಮತ್ತು ಪ್ಯಾರೀಸ್‌ ನಗರಗಳಿಕ್ಕಿಂತಲೂ ಕಡಿಮೆ ಇತ್ತು. ಪ್ರಸ್ತುತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ’ ಎಂದು ಹೇಳಿದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT