ನವದೆಹಲಿ: ಭಾರತವು ಅತ್ಯಂತ ವೇಗದ ಬೆಳವಣಿಗೆ ಕಾಣುವ ಅರ್ಥ ವ್ಯವಸ್ಥೆ ಎಂಬ ಖ್ಯಾತಿಯನ್ನು 2023ರಲ್ಲಿಯೂ ಉಳಿಸಿಕೊಳ್ಳಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಅಲ್ಲದೆ, ವಿಶ್ವದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಈ ವರ್ಷ ಭಾರತದ ಪಾಲು ಶೇಕಡ 15.4ರಷ್ಟು ಇರಲಿದೆ ಎಂದು ಅದು ಹೇಳಿದೆ.

ಭಾರತ ಮತ್ತು ಚೀನಾ ಒಟ್ಟಾಗಿ, ವಿಶ್ವದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಸರಿಸುಮಾರು ಅರ್ಧದಷ್ಟು ಕೊಡುಗೆ ನೀಡಲಿವೆ. ಚೀನಾ ದೇಶವು ಜಾಗತಿಕ ಆರ್ಥಿಕ ಬೆಳವಣಿಗೆಗೆ ಶೇ 34.9ರಷ್ಟು ಕೊಡುಗೆ ನೀಡಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಈ ಬಾರಿ ಏಷ್ಯಾದ ಪಾಲು ಶೇ 70ರಷ್ಟು ಇರಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.

‘ಹಣಕಾಸಿನ ನೀತಿಗಳು ಬಿಗಿಯಾಗಿದ್ದರೂ, ಏಷ್ಯಾದ ಮಾರುಕಟ್ಟೆಗಳಲ್ಲಿ ಆಂತರಿಕ ಬೇಡಿಕೆಯು ಬಲಿಷ್ಠವಾಗಿಯೇ ಉಳಿದಿದೆ’ ಎಂದು ಐಎಂಎಫ್ ತಿಳಿಸಿದೆ. ಈ ವರ್ಷದಲ್ಲಿ ಏಷ್ಯಾದ ಬೆಳವಣಿಗೆಯು ಶೇ 4.6ರಷ್ಟು ಇರಲಿದೆ ಎಂದು ಅದು ಅಂದಾಜು ಮಾಡಿದೆ. ಐಎಂಎಫ್ ಈ ಮೊದಲು ಸಿದ್ಧಪಡಿಸಿದ್ದ ಅಂದಾಜಿನಲ್ಲಿ, ಏಷ್ಯಾದ ಬೆಳವಣಿಗೆ ಶೇ 4.3ರಷ್ಟು ಇರಲಿದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.