2021ರ ಏಪ್ರಿಲ್ 1ರಿಂದ ದೇಶದಾದ್ಯಂತ ಭಾರತ್ ಸ್ಟೇಜ್–6 (ಬಿಎಸ್–6) ಪರಿಮಾಣದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಲು ತೈಲ ಕಂಪನಿಗಳು ಸಿದ್ಧವಾಗಿವೆ.

ಏಪ್ರಿಲ್ 1ರಿಂದ ದೇಶದಾದ್ಯಂತ ಬಿಎಸ್–6 ವಾಯುಮಾಲಿನ್ಯ ಪರಿಮಾಣ ಜಾರಿಗೆ ಬರಲಿದೆ. ಆನಂತರ ಬಿಎಸ್–6 ಇಂಧನವನ್ನು ಮಾತ್ರ ಮಾರಾಟ ಮಾಡಬಹುದು ಮತ್ತು ಹೊಸದಾಗಿ ನೋಂದಣಿ ಆಗಲಿರುವ ವಾಹನಗಳೆಲ್ಲವೂ ಬಿಎಸ್–6 ಪರಿಮಾಣದ ಎಂಜಿನ್ ಹೊಂದಿರಬೇಕು. ಇದರಿಂದ ವಾಹನಗಳಿಂದ ಆಗುವ ವಾಯುಮಾಲಿನ್ಯ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಲಿದೆ.

ಈ ಇಂಧನವನ್ನು ಬಿಎಸ್–1, ಬಿಎಸ್–2, ಬಿಎಸ್–3 ಮತ್ತು ಬಿಎಸ್–4 ಪರಿಮಾಣದ ಎಂಜಿನ್ ಹೊಂದಿರುವ ವಾಹನಗಳಲ್ಲೂ ಬಳಸಬಹುದು. ಆದರೆ, ಬಿಎಸ್–6 ಪರಿಮಾಣದ ಇಂಧನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಆಗಲಿದೆ.

ಬಿಎಸ್–4ರಿಂದ ಬಿಎಸ್–6ನತ್ತ
ಪೆಟ್ರೋಲ್ ಮತ್ತು ಡೀಸೆಲ್ಗಳಲ್ಲಿ ಇರುವ ಗಂಧಕದ ಪ್ರಮಾಣವನ್ನು ಆಧರಿಸಿ ಅವುಗಳ ‘ಬಿಎಸ್’ ವರ್ಗೀಕರಣವನ್ನು ಗುರುತಿಸಲಾಗುತ್ತದೆ. ಇಂಧನವೊಂದರ 10 ಲಕ್ಷ ಕಣಗಳಲ್ಲಿ, ಗಂಧಕದ ಕಣಗಳು (ಪಾರ್ಟ್ಸ್ ಪರ್ ಮಿಲಿಯನ್–ಪಿಪಿಎಂ) ಎಷ್ಟಿವೆ ಎಂಬುದರ ಆಧಾರದ ಮೇಲೆ ಇದನ್ನು ವರ್ಗೀಕರಿಸಲಾಗುತ್ತದೆ.

50 ಪಿಪಿಎಂ:ಬಿಎಸ್–4 ಪೆಟ್ರೋಲ್–ಡೀಸೆಲ್ನಲ್ಲಿ ಇರುವ ಗಂಧಕದ ಪ್ರಮಾಣ
10 ಪಿಪಿಎಂ:ಬಿಎಸ್–6ಪೆಟ್ರೋಲ್–ಡೀಸೆಲ್ನಲ್ಲಿ ಇರುವ ಗಂಧಕದ ಪ್ರಮಾಣ

ಸಾರಜನಕದ ಆಕ್ಸೈಡ್ ಉಗುಳುವಿಕೆ ಇಳಿಕೆ
25 %:ಬಿಎಸ್–4 ಪೆಟ್ರೋಲ್ ಎಂಜಿನ್ ವಾಹನದಲ್ಲಿ ಬಿಎಸ್–6 ಪೆಟ್ರೊಲ್ ಬಳಸುವುದರಿಂದಸಾರಜನಕದ ಆಕ್ಸೈಡ್ ಉಗುಳುವಿಕೆಯಲ್ಲಿ ಆಗುವ ಇಳಿಕೆ ಪ್ರಮಾಣ

70 %:ಬಿಎಸ್–4 ಡೀಸೆಲ್ ಎಂಜಿನ್ ವಾಹನದಲ್ಲಿ ಬಿಎಸ್–6 ಡೀಸೆಲ್ ಬಳಸುವುದರಿಂದ ಸಾರಜನಕದ ಆಕ್ಸೈಡ್ ಉಗುಳುವಿಕೆಯಲ್ಲಿ ಆಗುವ ಇಳಿಕೆ ಪ್ರಮಾಣ

* ವಾಹನಗಳ ಹೊಗೆಯಲ್ಲಿ ಇರುವ ಮಾಲಿನ್ಯಕಾರಕ ಕಣಗಳ (ಪಿಎಂ) ಪ್ರಮಾಣವೂ ಕಡಿಮೆ ಆದಲಿದೆ

₹ 60,000 ಕೋಟಿ
ಬಿಎಸ್ ಪರಿಮಾಣ ಜಾರಿಗೆ ಬಂದಾಗಿನಿಂದ ಬಿಎಸ್–4 ಪರಿಮಾಣದವರೆಗೆ, ತೈಲ ಸಂಸ್ಕರಣ ಘಟಕಗಳ ಮೇಲ್ದರ್ಜೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾಡಿರುವ ವೆಚ್ಚ

₹ 35,000 ಕೋಟಿ
ತೈಲ ಸಂಸ್ಕರಣ ಘಟಕಗಳನ್ನು ಬಿಎಸ್–4ನಿಂದ ಬಿಎಸ್–6ಗೆ ಮೇಲ್ದರ್ಜೆಗೆ ಏರಿಸಲುಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾಡಿರುವ ವೆಚ್ಚ

* ಈ ವೆಚ್ಚವನ್ನು ಸರಿದೂಗಿಸಿ
ಕೊಳ್ಳಲು ತೈಲ ಕಂಪನಿಗಳು ಇಂಧನದ ಬೆಲೆಯನ್ನು ಏರಿಕೆ ಮಾಡಲಿವೆ. ಆದರೆ, ಏರಿಕೆ ಪ್ರಮಾಣ ಬಹಿರಂಗವಾಗಿಲ್ಲ.

ಕಡಿಮೆ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ
‘ಕೇವಲ ಮೂರು ವರ್ಷಗಳ ಅಂತರದಲ್ಲಿ ಭಾರತವು ಬಿಎಸ್–4 ಪರಿಮಾಣದಿಂದ ಬಿಎಸ್–6 ಪರಿಮಾಣಕ್ಕೆ ಜಿಗಿಯುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಷ್ಟು ದೊಡ್ಡ ಪರಿವರ್ತನೆ ಸಾಹಸವೇ ಸರಿ’ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮುಖ್ಯಸ್ಥ ಸಂಜೀವ್ ಸಿಂಗ್ ಹೇಳಿದ್ದಾರೆ.

‘2019ರ ಅಂತ್ಯದ ವೇಳೆಗೆ ಎಲ್ಲಾ ತೈಲ ಸಂಸ್ಕರಣ ಘಟಕಗಳು ಬಿಎಸ್–6 ಪರಿಮಾಣದ ಇಂಧನ ಉತ್ಪಾದನೆ ಆರಂಭಿಸಿವೆ. ಇವನ್ನು ತೈಲ ಸಂಗ್ರಹಾಗಾರಗಳಿಗೆ ರವಾನೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಈ ಇಂಧನವು ಬಂಕ್ಗಳಿಗೆ ಪೂರೈಕೆ ಆಗಲಿದೆ. ಏಪ್ರಿಲ್ 1ರಿಂದ ಬಿಎಸ್–6 ಇಂಧನ ಮಾರಾಟವಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ಇದು ಬಹುದೊಡ್ಡ ಕೆಲಸ. ಮೊದಲು ಸಂಗ್ರಹಾಗಾರಗಳು, ಕೊಳವೆಮಾರ್ಗಗಳಲ್ಲಿ ಇರುವ ಬಿಎಸ್–4 ಇಂಧನವನ್ನು ಖಾಲಿ ಮಾಡಬೇಕು. ನಂತರ ಬಂಕ್ಗಳಲ್ಲಿ ಇರುವ ಬಿಎಸ್–4 ಇಂಧನವನ್ನು ಖಾಲಿ ಮಾಡಬೇಕು. ಇಡೀ ವ್ಯವಸ್ಥೆಗೆ ಬಿಎಸ್–6 ಇಂಧನ ತುಂಬಿಸಬೇಕು. ಈ ಕೆಲಸವನ್ನು ಬಹಳ ಯೋಜಿತವಾಗಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

2017ರ ಏಪ್ರಿಲ್ 1ರಿಂದ ದೇಶದಾದ್ಯಂತ ಬಿಎಸ್–4 ಪರಿಮಾಣ ಜಾರಿಗೆ ಬಂದಿತ್ತು. ಆನಂತರ 2022ರಲ್ಲಿ ಬಿಎಸ್–5 ಪರಿಮಾಣ ಜಾರಿಗೆ ಬರಬೇಕಿತ್ತು. ಬಿಎಸ್–6 ಪರಿಮಾಣ ಜಾರಿಗೆ ಕಾಲಮಿತಿಯನ್ನು ನಿಗದಿ ಮಾಡಿರಲಿಲ್ಲ. ಆದರೆ, ಈ ನಡುವೆ ದೇಶದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. 2017ರ ಪ್ಯಾರಿಸ್ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕುವ ಘೋಷಣೆಗೆ ಭಾರತವು ಸಹಿ ಹಾಕಿದೆ. ತ್ವರಿತವಾಗಿ ಬಿಎಸ್–6 ಪರಿಮಾಣವನ್ನು ಅಳವಡಿಸಿಕೊಳ್ಳಲು ಸರ್ಕಾರವು ಮುಂದಾಯಿತು. ಹೀಗಾಗಿ ಬಿಎಸ್–5 ಪರಿಮಾಣವನ್ನು ಪಕ್ಕಕ್ಕಿರಿಸಿ, ಬಿಎಸ್–4ನಿಂದ ನೇರವಾಗಿಬಿಎಸ್–6 ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಯಿತು.

‘ಇಂಧನ ಪರಿಮಾಣವನ್ನು ಮೇಲ್ದರ್ಜೆಗೆ ಏರಿಸಲು ತೈಲ ಸಂಸ್ಕರಣ ಘಟಕಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ನಂತರ ವಾಹನ ತಯಾರಕರೂ ಎಂಜಿನ್ಗಳ ಬಿಎಸ್ ಪರಿಮಾಣವನ್ನು ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ಒಂದು ಪರಿಮಾಣದಿಂದ ಮತ್ತೊಂದು ಪರಿಮಾಣಕ್ಕೆ ಹೋಗಲು ಹಲವು ವರ್ಷಗಳು ಬೇಕಾಗುತ್ತವೆ. ಬಿಎಸ್–4ನಿಂದ ಬಿಎಸ್–5ಗೆ, ಆನಂತರ ಬಿಎಸ್–5ನಿಂದ ಬಿಎಸ್–6ಗೆ ಹೋಗಲು ಕನಿಷ್ಠ ಆರು ವರ್ಷಗಳಾದರೂ ಬೇಕಾಗಿತ್ತು. ಆದರೆ, ಬಿಎಸ್–4ನಿಂದ ಬಿಎಸ್–6ಗೆ ಪರಿವರ್ತನೆಯನ್ನು ಕೇವಲ 3 ವರ್ಷಗಳಲ್ಲಿ ಸಾಧಿಸಲಾಗಿದೆ’ ಎಂದು ಸಂಜೀವ್ ಸಿಂಗ್ ವಿವರಿಸಿದ್ದಾರೆ.

ಭಾರತದಲ್ಲಿ ಬಿಎಸ್–1 ಪರಿಮಾಣವನ್ನು 2000ರಲ್ಲಿ ಮತ್ತು ಬಿಎಸ್–2 ಪರಿಮಾಣವನ್ನು 2001ರಲ್ಲಿ ಜಾರಿಗೆ ತರಲಾಗಿತ್ತು. ದೇಶದಾದ್ಯಂತ ಬಿಎಸ್–3 ಜಾರಿಗೆ ತರಲು 9 ವರ್ಷ (2010) ಬೇಕಾಯಿತು. ದೇಶದಾದ್ಯಂತ ಬಿಎಸ್–4 ಪರಿಮಾಣ ಜಾರಿಗೆ ತರಲು ಮತ್ತೆ ಏಳು (2017) ವರ್ಷ ಬೇಕಾಯಿತು.

ಆಧಾರ: ಪಿಟಿಐ

ಏಪ್ರಿಲ್ 1ರಿಂದ ಭಾರತದಲ್ಲಿ ದೊರೆಯುವ ಇಂಧನವು ವಿಶ್ವದಲ್ಲೇ ಅತ್ಯಂತ ಶುದ್ಧವಾದ ಇಂಧನವಾಗಿರಲಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ದೊರೆಯುವ ಇಂಧನಕ್ಕಿಂತ, ಶುದ್ಧ ಇಂಧನ ಇದಾಗಿರಲಿದೆ
–ಸಂಜೀವ್ ಸಿಂಗ್, ಇಂಡಿಯಲ್ ಆಯಿಲ್ ಕಾರ್ಪೊರೇಷನ್ ಮುಖ್ಯಸ್ಥ

ಏ. 1ರಿಂದ ಭಾರತದಲ್ಲಿ ದೊರೆಯುವ ಇಂಧನವು ವಿಶ್ವದಲ್ಲೇ ಅತ್ಯಂತ ಶುದ್ಧವಾದ ಇಂಧನವಾಗಿರಲಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ದೊರೆಯುವ ಇಂಧನಕ್ಕಿಂತ, ಶುದ್ಧ ಇಂಧನ ಇದಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.