ಈ ಲೇಖನದ ತಲೆಬರಹ ನೋಡಿ ಎಲ್ಲಿಯ ಜಪಾನ್, ಎಲ್ಲಿಯ ಕರ್ನಾಟಕ ಎಂದು ಅಚ್ಚರಿಯಾಗಬಹುದು. ಹೌದು, ಕರುನಾಡಿನ ಕಾಫಿ ಎಂದರೆ ಜಪಾನಿಯರಿಗೆ ಅಚ್ಚುಮೆಚ್ಚು. ಚಹಾ ಮತ್ತು ಲಸ್ಸಿಗಿಂತ ಭಾರತೀಯ ಕಾಫಿಗೆ ಜಪಾನ್ನಲ್ಲಿ ಹೆಚ್ಚು ಬೇಡಿಕೆ ಇದೆ. ಭಾರತದ ಕಾಫಿ ಬ್ರ್ಯಾಂಡ್ಗಳಾದ ಮನ್ಸೂನೂಡ್ ಮಲಬಾರ್, ಮೈಸೂರು ನುಗ್ಗೆಟ್ಸ್ ಎಕ್ಸ್ಟ್ರಾ ಬೋಲ್ಡ್, ರೋಬಸ್ಟಾ ಕಾಫಿ ರಾಯಲ್, ಆಂಧ್ರಪ್ರದೇಶದ ಅರಕು ಕಾಫಿಯ ಕಂಪು ಜಪಾನಿಯರಿಗೆ ತುಂಬ ಅಚ್ಚುಮೆಚ್ಚು.

ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಮೂಲಕ ಜಪಾನ್ಗೆ ಕಾಫಿ ಪರಿಚಯವಾಗಿದೆ. ಬ್ರೆಜಿಲ್ ಅತಿದೊಡ್ಡ ಕಾಫಿ ಪೂರೈಕೆದಾರ ದೇಶವಾಗಿದ್ದರೂ ಭಾರತದ ಕಾಫಿಗೆ ಜಪಾನ್ನಲ್ಲಿ ಎಂದೂಬೇಡಿಕೆ ಕುಸಿದಿಲ್ಲ.

ಕಾಫಿ ಮಾರುಕಟ್ಟೆ ಹೇಗೆ ಹೆಚ್ಚಿಸಬಹುದು: ಟೋಕಿಯೊದಲ್ಲಿನ ರಾಯಭಾರ ಕಚೇರಿ ಸಹಯೋಗದಲ್ಲಿ ಭಾರತದ ಕಾಫಿ ಬೋರ್ಡ್ ಟೋಕಿಯೊದಲ್ಲಿ ನಡೆಯುವ ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಜಪಾನ್ (ಎಸ್ಸಿಎಜೆ) ಎಂಬ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸುತ್ತಿದೆ. ಭಾರತದ ಕಾಫಿ ಉತ್ಪಾದಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಕರ್ನಾಟಕದಿಂದಲೂ ಸಾಕಷ್ಟು ಕಾಫಿ ಬೆಳೆಗಾರರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕರ್ನಾಟಕದ ಹತ್ತು ಹಲವು ಕಾಫಿ ಬೆಳೆಗಳು ಇಲ್ಲಿ ಪ್ರದರ್ಶನವಾಗುತ್ತವೆ.

ಕಾಫಿ ಬೋರ್ಡ್ ವಿರುದ್ಧ ಒಂದೆರಡು ದೂರುಗಳೂ ಇವೆ. ಪ್ರದರ್ಶನಕ್ಕೆ ಮಂಡಳಿ ಬರುತ್ತದೆ ಹೋಗುತ್ತದೆ. ಆದರೆ ಯಾವುದೇ ವರ್ಷ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (ಎಸ್ಪಿಒಸಿ) ನಡೆಸುವುದಿಲ್ಲ. ಕಾಫಿ ಉದ್ಯಮದ ವಹಿವಾಟು ವಿಸ್ತರಣೆಗೆ ಅಲ್ಲಿ ಹೇರಳ ಅವಕಾಶಗಳು ದೊರೆತರೂ ಅದನ್ನು ಬಳಸಿಕೊಳ್ಳುವುದಿಲ್ಲ ಎನ್ನುವ ಟೀಕೆಗಳಿವೆ.

‘ಎಸ್ಸಿಎಜೆಗೆ ಬರುವವರಿಗೆ ಮಾತ್ರವೇ ಭಾರತದ ಕಾಫಿ ಸವಿಯುವ ಅವಕಾಶ ಇದೆ. ಜಪಾನ್ನಲ್ಲಿ ಸಾವಿರಾರು ಭಾರತೀಯ ರೆಸ್ಟೋರೆಂಟ್ಗಳಿವೆ. ಅಲ್ಲಿ ಭಾರತದ ಉತ್ತಮ ಗುಣಮಟ್ಟದ ಕಾಫಿ ಲಭ್ಯವಿಲ್ಲ. ಈ ಬಗ್ಗೆ ಮಂಡಳಿ ಗಮನಹರಿಸಬಹುದು’ ಎಂದು ಭಾರತದ ಕಾಫಿ ಬ್ಲಾಗರ್ ಮತ್ತು ಉದ್ಯಮಿ ಹಿರೊಕೊ ಯಮಾಡ ಹೇಳುತ್ತಾರೆ.

‘ಜಪಾನ್ ಕಾಫಿ ಆಮದುದಾರಿಗೆ ಭಾರತದಲ್ಲಿ ಕಾಫಿ ಹೇಗೆ ಬೆಳೆದು ಸಿದ್ಧಪಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಕೊರತೆ ಇದೆ’ ಎನ್ನುತ್ತಾರೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರ ಡಿ.ಎಂ.ಪೂರ್ಣೇಶ್.

ಜಪಾನ್ನಲ್ಲಿ ಕಾಫಿ ಪ್ರವಾಸೋದ್ಯಮವನ್ನು ಪ್ರಚುರಪಡಿಸಬಹುದು. ಇಲ್ಲಿ ಸಾಂಪ್ರದಾಯಿಕ ಕಾಫಿ ಹೌಸ್ (Kissatens) ನಿಂದ ಹಿಡಿದು ಅತ್ಯಾಧುನಿಕ ಬೆಸ್ಪೋಕ್ ರೋಸ್ಟರೀಸ್ವರೆಗೆ ರೆಸ್ಟೋರೆಂಟ್ಗಳಿವೆ. ಇಲ್ಲಿಗೆ ಬರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಮಾಡಬೇಕಾಗಿದೆ.

ಪ್ರದರ್ಶನಗಳಿಂದ ಭಾರಿ ಪ್ರಯೋಜನ: ‘ಜಪಾನ್ನಲ್ಲಿ ಕಾಫಿ ಮಾರುಕಟ್ಟೆ ಇತ್ತೀಚೆಗೆ ಹೆಚ್ಚು ಬೆಳೆಯುತ್ತಿದೆ. ಕರ್ನಾಟಕದಿಂದಲೂ ಕಾಫಿ ಅಲ್ಲಿಗೆ ರಫ್ತಾಗುತ್ತದೆ. ಸಣ್ಣ ಸಣ್ಣ ರೆಸ್ಟೋರೆಂಟ್ಗಳ ಮೂಲಕವೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶ ಇದೆ’ ಎನ್ನುತ್ತಾರೆ ಸಕಲೇಶಪುರದ ಕಾಫಿ ಬೆಳೆಗಾರ ಪ್ರಶಾಂತ್ ನಾಗರಾಜ್.

ಜಪಾನ್ನ ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದಿಂದ ಸಾವಯವ ಕಾಫಿಯ ಆಮದು ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. ಇದು ಅಲ್ಲಿನ ಗ್ರಾಹಕರು ಭಾರತದ ಕಾಫಿಯ ಕಡೆಗೆ ಹೇಗೆ ಆಕರ್ಷಿತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇದೇ ರೀತಿಯ ಪ್ರದರ್ಶನಗಳಾದ ವರ್ಲ್ಡ್ ಸ್ಪೆಷಾಲಿಟಿ ಕಾಫಿ ಸಮ್ಮೇಳನ ಮತ್ತು ಪ್ರದರ್ಶನ ಪ್ರತಿ ವರ್ಷ ಹಲವು ದೇಶಗಳಲ್ಲಿ ನಡೆಯುತ್ತದೆ. ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಆಮೆರಿಕ ಮತ್ತು ಯುರೋಪ್ ಇವುಗಳಲ್ಲಿ ಪ್ರಮುಖವಾಗಿವೆ.

‘ಕಾಫಿಯ ರಫ್ತು ಉತ್ತೇಜನಕ್ಕೆ ಕಾಫಿ ಬೋರ್ಡ್ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ರೀತಿಯ ಪ್ರದರ್ಶನ ಮತ್ತು ಮಾರಾಟವಲ್ಲದೆ ಕೊಳ್ಳುವವರು ಮತ್ತು ಮಾರುವವರ ಸಭೆ, ಭಾರತದ ಪ್ರಮುಖ ಕಾಫಿ ತಳಿಗಳ ಕುರಿತ ಮಾಹಿತಿ ಪ್ರದರ್ಶನ, ಪತ್ರಿಕೆ, ನಿಯತಕಾಲಿಗಳಲ್ಲಿ ಜಾಹೀರಾತು, ಸಾಕ್ಷ್ಯಚಿತ್ರಗಳ ಮೂಲಕ ಪ್ರಚಾರ ಮಾಡಬೇಕಾಗಿದೆ’ ಎಂದೂ ಪ್ರಕಾಶ್ ಮಲ್ಲೇಗೌಡ ಹೇಳುತ್ತಾರೆ.

ತರೇಹವಾರಿ ಕಾಫಿಗಳು
ಕರ್ನಾಟಕದ ಕಾಫಿಗಳಾದ ಬಾಬಾಬುಡನ್ ಗಿರಿ, ಬಿಳಿಗಿರಿ, ಚಿಕ್ಕಮಗಳೂರು, ಕೂರ್ಗ್, ಮೈಸೂರು ನುಗ್ಗೆಟ್ಸ್, ಇತರ ರಾಜ್ಯಗಳ ಕಾಫಿಗಳಾದ ಅರಕು ವ್ಯಾಲಿ (ಆಂಧ್ರಪ್ರದೇಶ) . ಬ್ರಹ್ಮಪುತ್ರ, ಮಂಜರಾಬಾರ್, ಟ್ರಾವಂಕೂರ್, ವಯನಾಡು, ಮನ್ಸೂನೂಡ್ ಮಲಬಾರ್, ರೊಬಾಸ್ಟಾ ಕಾಫಿ ರಾಯಲ್ ಸೇರಿದಂತೆ ನೂರಾರು ಕಾಫಿ ತಳಿಗಳ ಬೀಜಗಳು ಪ್ರದರ್ಶನದಲ್ಲಿ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.