ಮುಂಬೈ: 2022ರಲ್ಲಿ ಭಾರತ ರೂಪಾಯಿಯು ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿಯಾಗಿದೆ. ರೂಪಾಯಿ ಈ ವರ್ಷದಲ್ಲಿ ಒಟ್ಟು ಶೇಕಡ 11.3ರಷ್ಟು ಕುಸಿತ ಕಂಡಿದೆ. 2013ರ ನಂತರದ ಅತ್ಯಂತ ದೊಡ್ಡ ಕುಸಿತ ಇದು.

2021ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹ 74.33 ಆಗಿತ್ತು. 2022ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹ 82.72ಕ್ಕೆ (ಡಿ. 29ರ ಮೌಲ್ಯ) ತಲುಪಿದೆ.

ರಷ್ಯಾ–ಉಕ್ರೇನ್ ಯುದ್ದದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಆದ ಹೆಚ್ಚಳ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಇಂಬು ಕೊಟ್ಟಿತು. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು ₹ 81.50ರಿಂದ ₹ 83.50ರ ನಡುವೆ ಇರಲಿದೆ ಎಂದು ವರ್ತಕರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.