ನವದೆಹಲಿ: ಭಾರತೀಯರ ದೇಹಕ್ಕೆ ಹೆಚ್ಚು ಸೂಕ್ತವಾಗಿ ಹೊಂದಿಕೆಯಾಗುವ, ಸಿದ್ಧ ಉಡುಪುಗಳ ತಯಾರಿಯಲ್ಲಿ ಬಳಕೆ ಮಾಡಬೇಕಿರುವ ‘ಇಂಡಿಯಾಸೈಜ್’ ಅಳತೆಗೋಲನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.

ಇದು ಅಂತಿಮಗೊಂಡು, ಬಳಕೆ ಶುರುವಾದ ನಂತರದಲ್ಲಿ ಭಾರತೀಯರು ತಮ್ಮ ದೇಹಕ್ಕೆ ಹೆಚ್ಚು ಸೂಕ್ತವಾಗುವ ಅಳತೆಯನ್ನು ಹೊಂದಿರುವ ಸಿದ್ಧ ಉಡುಪುಗಳನ್ನು ಖರೀದಿಸಬಹುದು ಎಂದು ಅವರು ಹೇಳಿದ್ದಾರೆ. ಈಗ ದೇಶದಲ್ಲಿ ಸಿದ್ಧ ಉಡುಪುಗಳನ್ನು ಮಾರಾಟ ಮಾಡುವ ದೇಶಿ ಹಾಗೂ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಅಮೆರಿಕ ಹಾಗೂ ಬ್ರಿಟನ್ನಿನ ಅಳತೆಗೋಲು ಆಧರಿಸಿ, ‘ಸ್ಮಾಲ್’, ‘ಮೀಡಿಯಂ’ ಮತ್ತು ‘ಲಾರ್ಜ್’ ಗಾತ್ರದ ಬಟ್ಟೆಗಳನ್ನು ಮಾರುಕಟ್ಟೆಗೆ ತರುತ್ತಿವೆ.

ಆದರೆ ಪಾಶ್ಚಿಮಾತ್ಯರ ದೇಹಕ್ಕೂ, ಭಾರತೀಯರ ದೇಹಕ್ಕೂ ವ್ಯತ್ಯಾಸವಿದೆ. ಇದರ ಪರಿಣಾಮವಾಗಿ, ಈಗಿನ ಕೆಲವು ಬ್ರ್ಯಾಂಡ್‌ಗಳ ಬಟ್ಟೆಗಳು ಭಾರತೀಯರಿಗೆ ಸರಿಹೊಂದುತ್ತಿಲ್ಲ ಎಂಬ ದೂರುಗಳಿವೆ. ‘ಇಂಡಿಯಾಸೈಜ್ ವ್ಯವಸ್ಥೆಯು ಶೀಘ್ರದಲ್ಲಿಯೇ ಜಾರಿಗೆ ಬರುತ್ತದೆ ಎಂದು ಆಶಿಸುತ್ತಿದ್ದೇವೆ’ ಎಂದು ಶಾ ಅವರು ಹೇಳಿದ್ದಾರೆ.

ಜವಳಿ ಸಚಿವಾಲಯವು ‘ಇಂಡಿಯಾಸೈಜ್’ ಯೋಜನೆಗೆ ಈ ಹಿಂದೆ ಅನುಮೋದನೆ ನೀಡಿದೆ. ಭಾರತೀಯ ಸಿದ್ಧ ಉಡುಪು ಉದ್ಯಮವು ಭಾರತೀಯರ ದೇಹಕ್ಕೆ ಸರಿಹೊಂದುವ ಸಿದ್ಧ ಉಡುಪು ತಯಾರಿಸಲು ನೆರವಾಗುವ ಉದ್ದೇಶವನ್ನು ಇದು ಹೊಂದಿದೆ.

ದೇಶದಾದ್ಯಂತ 25 ಸಾವಿರಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರ ದೇಹದ ಅಳತೆಯನ್ನು ಈ ಯೋಜನೆಯ ಅಡಿಯಲ್ಲಿ 3–ಡಿ ತಂತ್ರಜ್ಞಾನ ಬಳಸಿ ಪಡೆಯಲಾಗುತ್ತದೆ. ದೇಶಿ ಹಾಗೂ ವಿದೇಶಿ ಸಿದ್ಧ ಉಡುಪು ತಯಾರಕರು ಭಾರತೀಯರಿಗೆ ಸರಿಹೊಂದುವ ಬಟ್ಟೆ ತಯಾರಿಸಲು ಈ ಅಳತೆಯು ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.