ನವದೆಹಲಿ: ‘ದೇಶದಲ್ಲಿ ತಯಾರಾಗುವ ಮದ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ, ಮದ್ಯ ರಫ್ತು ವಹಿವಾಟು ಕೆಲವೇ ವರ್ಷಗಳಲ್ಲಿ ₹8,300 ಕೋಟಿ ದಾಟುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, 2022–23ನೇ ಸಾಲಿನಡಿ ದೇಶದ ಮದ್ಯ ರಫ್ತು ₹2,700 ಕೋಟಿ ಆಗಿತ್ತು. ಪ್ರಸಕ್ತ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ₹1,900 ಕೋಟಿ ಆಗಿದೆ ಎಂದು ವಿವರಿಸಿದರು.

ರಾಷ್ಟ್ರದಲ್ಲಿ ಮದ್ಯದ ಮಾರುಕಟ್ಟೆ ವಲಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇಶೀಯ ಮದ್ಯದ ಬ್ರಾಂಡ್ಗಳಿಗೂ ಜಾಗತಿಕಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದರು.

ವಿಶ್ವದಾದ್ಯಂತ ಮದ್ಯದ ವ್ಯಾಪಾರ ವಹಿವಾಟು ₹10.82 ಲಕ್ಷ ಕೋಟಿಯಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.