ನವದೆಹಲಿ: ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಮುಂದಿನ ತಿಂಗಳು ತನ್ನ ರಫ್ತು-ಕೇಂದ್ರಿತ ಉತ್ಪಾದನಾ ಘಟಕಗಳಲ್ಲಿ ಮೋಟಾರ್ ಸೈಕಲ್ ಮತ್ತು ತ್ರಿಚಕ್ರ ವಾಹನ ಉತ್ಪಾದನೆಯನ್ನು ಶೇ 25 ರಷ್ಟು ಕಡಿತವನ್ನು ಮಾಡುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬೆನ್ನಿಗೇ ಬಜಾಜ್ ಆಟೋ ಷೇರುಗಳು ಸೋಮವಾರ ಶೇ 5.05 ರಷ್ಟು ಕುಸಿತ ಕಂಡಿವೆ.

ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳು ₹3,655.35ಕ್ಕೆ ಕುಸಿದವು. ಜನವರಿ 24ರಿಂದೀಚೆಗೆ ಬಜಾಜ್ ಆಟೋ ಷೇರುಗಳ ಬೆಲೆ ಈ ಮಟ್ಟಕ್ಕೆ ಕುಸಿದಿದ್ದು ಇದೇ ಮೊದಲು.

ಮಾದ್ಯಮ ವರದಿಯ ಕುರಿತು ಬಜಾಜ್ ಆಟೋ ಪ್ರತಿಕ್ರಿಯಿಸಿಲ್ಲ. ಉತ್ಪಾದನೆ ಕಡಿತದ ಚಿಂತನೆಯು ಕಂಪನಿಯ ಅತಿದೊಡ್ಡ ಮಾರುಕಟ್ಟೆಯಾದ ನೈಜೀರಿಯಾದಲ್ಲಿನ ಒತ್ತಡದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

‘ನಮ್ಮ ಅತಿದೊಡ್ಡ ಮಾರುಕಟ್ಟೆಯಾದ ನೈಜೀರಿಯಾದಲ್ಲಿ ಚುನಾವಣೆಗಳು ನಡೆಯುತ್ತಿದೆ. ಚುನಾವಣೆ ಮುಗಿಯುವ ವರೆಗೆ ಅಲ್ಲಿನ ಪರಿಸ್ಥಿತಿ ಅಸ್ಥಿರವಾಗಿದೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಜನವರಿಯಲ್ಲಿ ಹೇಳಿದ್ದರು.

ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ನಡುವೆಯೂ ನೈಜೀರಿಯಾದ ಚುನಾವಣಾ ಆಯೋಗವು ರಾಷ್ಟ್ರೀಯ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸುತ್ತಿದೆ.

ಬಜಾಜ್ ಆಟೋ ಮಾರ್ಚ್‌ನಲ್ಲಿ 2,50,000-2,70,000 ಯೂನಿಟ್‌ಗಳನ್ನು ಉತ್ಪಾದಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕಂಪನಿಯ ಸರಾಸರಿ ಮಾಸಿಕ ಉತ್ಪಾದನೆಯು 3,38,000 ಯುನಿಟ್‌ಗಳಷ್ಟಿದೆ.

ಇವುಗಳನ್ನೂ ಓದಿ

Bajaj Auto | ಮಾರಾಟದಲ್ಲಿ ಶೇ. 8 ಪ್ರಗತಿ ದಾಖಲಿಸಿದ ಬಜಾಜ್ ಆಟೋ

ಇ–ದ್ವಿಚಕ್ರವಾಹನ ಗಡುವು ಅವಾಸ್ತವಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.