ನವದೆಹಲಿ: 2021ರ ಮಾರ್ಚ್ಗೆ ಕೊನೆಗೊಳ್ಳಲಿರುವ ಪ್ರಸಕ್ತ (2020–21) ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 30 ವರ್ಷಗಳ ಹಿಂದಿನ ಮಟ್ಟವಾದ ಶೇ 2ಕ್ಕೆ ಕುಸಿಯಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜಿಸಿದೆ.

ವಿಶ್ವದ ಅನೇಕ ದೇಶಗಳಲ್ಲಿ ವಿಧಿಸಲಾಗಿರುವ ದಿಗ್ಬಂಧನದ ಕಾರಣಕ್ಕೆ ಆರ್ಥಿಕ ಹಿಂಜರಿತವು ಜಾಗತಿಕ ಆರ್ಥಿಕತೆಯನ್ನು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಭಾರತದ ಆರ್ಥಿಕತೆ ಕುರಿತು ಮಾರ್ಚ್ 20ರಂದು ಮಾಡಿದ್ದ ಅಂದಾಜನ್ನು (ಶೇ 5.1) ಗಣನೀಯವಾಗಿ ತಗ್ಗಿಸಬೇಕಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಚೀನಾದಲ್ಲಿ ಜಾರಿಗೆ ತಂದಿದ್ದ ದಿಗ್ಬಂಧನದಿಂದಾಗಿ ಆರಂಭದಲ್ಲಿ ಸ್ಥಳೀಯ ತಯಾರಿಕಾ ಚಟುವಟಿಕೆಗಳಿಗೆ ಕಚ್ಚಾ ಸರಕುಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಈಗ ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿ ಕಂಡು ಬಂದಿರುವುದರಿಂದ ಈ ವರ್ಷ ಜಾಗತಿಕ ಹಿಂಜರಿತ ಕಂಡುಬರಲಿದೆ. ಇದರ ಪರಿಣಾಮವಾಗಿ ಭಾರತದ ವೃದ್ಧಿ ದರ ಶೇ 2ರಷ್ಟಾಗಲಿದೆ. ಇದು ಹಿಂದಿನ 30 ವರ್ಷಗಳಲ್ಲಿನ ಕನಿಷ್ಠ ವೃದ್ಧಿ ದರವಾಗಿರಲಿದೆ. ಗ್ರಾಹಕರ ವೆಚ್ಚ ಗಮನಾರ್ಹವಾಗಿ ಕಡಿಮೆಯಾಗಲಿರುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಸ್ಎಂಇ) ಹಾಗೂ ಸೇವಾ ಕ್ಷೇತ್ರಗಳು ತೀವ್ರವಾಗಿ ಬಾಧಿತವಾಗಲಿವೆ ಎಂದು ತಿಳಿಸಿದೆ.

ಎಡಿಬಿ ಅಂದಾಜು: ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ಅಂದಾಜಿನ ಪ್ರಕಾರ, 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 4ರಷ್ಟು ಇರಲಿದೆ.

ವಿಶ್ವದಾದ್ಯಂತ ಕಂಡು ಬಂದಿರುವ ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಭಾರತದ ‘ಜಿಡಿಪಿ’ ಕುಸಿಯಲಿದೆ. ಎಂದು ‘ಎಡಿಬಿ’ ತಿಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.