ಮುಂಬೈ: ಭಾರತದ ವಿದೇಶಿ ಸಾಲವು 2023ರ ಜೂನ್ ಅಂತ್ಯಕ್ಕೆ ₹32,113 ಕೋಟಿಯಷ್ಟು ಏರಿಕೆ ಕಂಡು ₹52.34 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ಮಾಹಿತಿ ನೀಡಿದೆ.

2023ರ ಮಾರ್ಚ್ ಅಂತ್ಯಕ್ಕೆ ವಿದೇಶಿ ಸಾಲವು ₹51.92 ಲಕ್ಷ ಕೋಟಿಯಷ್ಟು ಇತ್ತು.

ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಹಾಗೂ ವಿದೇಶಿ ಸಾಲದ ಅನುಪಾತವು 2023ರ ಮಾರ್ಚ್ ಅಂತ್ಯದಲ್ಲಿ ಶೇ 18.8ರಷ್ಟು ಇದ್ದಿದ್ದು 2023ರ ಜೂನ್ ಅಂತ್ಯಕ್ಕೆ ಶೇ 18.ಕ್ಕೆ ಇಳಿಕೆ ಕಂಡಿದೆ ಎಂದು ಆರ್‌ಬಿಐ ತಿಳಿಸಿದೆ.

ಅಮೆರಿಕದ ಡಾಲರ್ ಮೌಲ್ಯ ವೃದ್ಧಿಯಾಗಿರುವುದರಿಂದ ಸಾಲದ ಪ್ರಮಾಣ ಹೆಚ್ಚಾಗಿದೆ. ದೀರ್ಘಾವಧಿಯ ಸಾಲವು ₹79,891 ಕೋಟಿಯಷ್ಟು ಹೆಚ್ಚಾಗಿ ₹42.02 ಲಕ್ಷ ಕೋಟಿಗೆ ತಲುಪಿದೆ. ಅಲ್ಪಾವಧಿ ಸಾಲದ ಪ್ರಮಾಣವು ಶೇ 20.6 ರಿಂದ ಶೇ 19.6ರಷ್ಟು ಇಳಿಕೆ ಕಂಡಿದೆ ಎಂದು ತಿಳಿಸಿದೆ.

ಚಾಲ್ತಿ ಖಾತೆ ಕೊರತೆ ಹೆಚ್ಚಳ ಮುಂಬೈ

ದೇಶದ ಚಾಲ್ತಿ ಖಾತೆ ಕೊರತೆಯು ಜನವರಿ–ಮಾರ್ಚ್ ಅವಧಿಗೆ ಹೋಲಿಸಿದರೆ ಏಪ್ರಿಲ್–ಜೂನ್ ಅವಧಿಯಲ್ಲಿ ಏರಿಕೆ ಕಂಡಿದೆ ಎಂದು ಆರ್‌ಬಿಐ ತಿಳಿಸಿದೆ. ವ್ಯಾಪಾರ ಕೊರತೆ ಅಂತರ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ. ಚಾಲ್ತಿ ಖಾತೆ ಕೊರತೆಯು ಏಪ್ರಿಲ್–ಜೂನ್ ಅವಧಿಯಲ್ಲಿ ₹ 76562 ಕೋಟಿಯಷ್ಟು ಆಗಿದೆ. ಜನವರಿ–ಮಾರ್ಚ್ ಅವಧಿಯಲ್ಲಿ ₹10818 ಕೋಟಿಯಷ್ಟು ಇತ್ತು. ವ್ಯಾಪಾರ ಕೊರತೆ ಅಂತರವು ಏಪ್ರಿಲ್–ಜೂನ್ ಅವಧಿಯಲ್ಲಿ ₹4.37 ಲಕ್ಷ ಕೋಟಿಯಿಂದ ₹4.71 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.