ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6ರಷ್ಟು ಪ್ರಗತಿ ಕಾಣಲಿದೆ ಎಂದು ದೇಶೀಯ ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಐಸಿಆರ್ಎ ಅಂದಾಜಿಸಿದೆ.

ಸರ್ಕಾರದ ಸಾರ್ವಜನಿಕ ವೆಚ್ಚದಲ್ಲಿನ ಇಳಿಕೆ ಹಾಗೂ ನಗರ ಪ್ರದೇಶದಲ್ಲಿ ಬೇಡಿಕೆ ಕುಗ್ಗಿರುವುದೇ ಇದಕ್ಕೆ ಕಾರಣ ಎಂದು ಗುರುವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

2024–25ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಶೇ 6.8ರಷ್ಟು ದಾಖಲಾಗಲಿದೆ. ಇದು 2023–24ನೇ ಆರ್ಥಿಕ ವರ್ಷದಲ್ಲಿ ದಾಖಲಾಗಿದ್ದ, ಶೇ 8.2ರಷ್ಟಕ್ಕಿಂತಲೂ ಕಡಿಮೆಯಿದೆ ಎಂದು ಹೇಳಿದೆ.

‘ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಮಂದಗತಿಯಲ್ಲಿದೆ. ಈ ಹಿಂದಿನ ಆರು ತ್ರೈಮಾಸಿಕದ ಕನಿಷ್ಠ ಮಟ್ಟಕ್ಕೆ ದಾಖಲಾಗಲಿದೆ’ ಎಂದು ತಿಳಿಸಿದೆ.

ಆಗಸ್ಟ್ 30ರಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಜೂನ್ ತ್ರೈಮಾಸಿಕದ ಜಿಡಿಪಿ ವರದಿಯನ್ನು ಬಿಡುಗಡೆ ಮಾಡಲಿದೆ.

2023–24ನೇ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 8.2ರಷ್ಟು ದಾಖಲಾಗಿತ್ತು.

‘ಲೋಕಸಭಾ ಚುನಾವಣೆಯಿಂದಾಗಿ ಜೂನ್ ತ್ರೈಮಾಸಿಕದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಾರ್ವಜನಿಕ ವೆಚ್ಚದಲ್ಲಿ ಇಳಿಕೆಯಾಗಿತ್ತು. ಇದರಿಂದ ಕೆಲವು ವಲಯಗಳ ಬೆಳವಣಿಗೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಇದು ಆರ್ಥಿಕತೆ ಬೆಳವಣಿಗೆ ಮೇಲೂ ಪರಿಣಾಮ ಬೀರಿದೆ’ ಎಂದು ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ನ ಗ್ರಾಹಕರ ವಿಶ್ವಾಸ ಸಮೀಕ್ಷೆ ಅನ್ವಯ ನಗರ ಪ್ರದೇಶದಲ್ಲಿ ಗ್ರಾಹಕರ ವಿಶ್ವಾಸವು ಅಚ್ಚರಿಯ ರೀತಿಯಲ್ಲಿ ಕುಸಿದಿದೆ. ಕಳೆದ ವರ್ಷ ಮುಂಗಾರು ಉತ್ತಮವಾಗಿರಲಿಲ್ಲ. ಇದು ಗ್ರಾಮೀಣ ಪ್ರದೇಶದ ಸುಧಾರಣೆಗೆ ಅಡ್ಡಿಯಾಯಿತು’ ಎಂದು ಹೇಳಿದ್ದಾರೆ.

ಕೆಲವು ಕೈಗಾರಿಕಾ ವಲಯಗಳಲ್ಲಿ ಸರಕುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಕೈಗಾರಿಕೆಗಳ ಲಾಭದಾಯಕತೆಗೆ ಪೆಟ್ಟು ನೀಡಿದೆ ಎಂದು ಹೇಳಿದ್ದಾರೆ.

ಹಲವು ಸೇವಾ ವಲಯಗಳ ಮೇಲೆ ಬಿಸಿ ಗಾಳಿಯು ಪರಿಣಾಮ ಬೀರಿತು. ಇದು ವಿದ್ಯುತ್ ಬೇಡಿಕೆ ಪ್ರಮಾಣವನ್ನು ಹೆಚ್ಚಿಸಿತು. ಹಾಗಾಗಿ, ಜೂನ್ ತ್ರೈಮಾಸಿಕದ ಆಂತರಿಕ ಉತ್ಪನ್ನದಲ್ಲಿನ ಒಟ್ಟು ಮೌಲ್ಯವರ್ಧನೆಯ (ಜಿವಿಎ) ವೇಗ ಕೂಡ ಮಂದಗತಿಯಲ್ಲಿದೆ (ಶೇ 5.7ರಷ್ಟು) ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.