ಮುಂಬೈ: ಜೂನ್‌ನಲ್ಲಿ ದೇಶದ ಹರಳು ಮತ್ತು ಚಿನ್ನಾಭರಣ ರಫ್ತು ಪ್ರಮಾಣವು ಶೇ 13ರಷ್ಟು ಇಳಿಕೆಯಾಗಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ನಡುವೆಯೂ ಈ ತಿಂಗಳಿನಲ್ಲಿ ₹15,939 ಕೋಟಿ ಮೌಲ್ಯದ ರಫ್ತು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹18,413 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತಾಗಿತ್ತು ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

ಕತ್ತರಿಸಿದ ಮತ್ತು ಪಾಲಿಷ್ ಮಾಡಿದ ವಜ್ರಗಳ ರಫ್ತು ಮೌಲ್ಯವು ₹8,496 ಕೋಟಿ ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಕಡಿಮೆಯಾಗಿದೆ. ಆದರೆ, ಚಿನ್ನಾಭರಣಗಳ ರಫ್ತಿನಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ. ಒಟ್ಟು ₹5,074 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ರಫ್ತು ಮಾಡಲಾಗಿದೆ ಎಂದು ತಿಳಿಸಿದೆ.

‘ಜಾಗತಿಕ ಬಿಕ್ಕಟ್ಟು ಮುಂದುವರಿದಿದೆ. ಇದು ಮಾರುಕಟ್ಟೆಯಲ್ಲಿ ಆರ್ಥಿಕ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಹಾಗಾಗಿ, ಹರಳು ಮತ್ತು ಚಿನ್ನಾಭರಣದ ರಫ್ತು ಕುಸಿತವಾಗಿದೆ’ ಎಂದು ಜಿಜೆಇಪಿಸಿ ಮಾಜಿ ಅಧ್ಯಕ್ಷ ಕಾಲಿನ್ ಷಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.