ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಇದ್ದ ಶೇ 10.3ಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಶೇ 5.8ಕ್ಕೆ ಇಳಿಕೆ ಕಂಡಿದೆ.

ಮುಖ್ಯವಾಗಿ, ತಯಾರಿಕೆ ಮತ್ತು ವಿದ್ಯುತ್ ವಲಯದ ಬೆಳವಣಿಗೆ ಕಡಿಮೆ ಆಗಿರುವುದರಿಂದ ಕೈಗಾರಿಕಾ ವಲಯದ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಆಗಿದೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ (ಶೇ 3.3) ಏರಿಕೆ ಕಂಡುಬಂದಿದೆ.

ತಯಾರಿಕಾ ವಲಯದ ಬೆಳವಣಿಗೆಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 2 ಇದ್ದಿದ್ದು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 4.5ಕ್ಕೆ ಏರಿಕೆ ಕಂಡಿದೆ. ವಿದ್ಯುತ್ ಉತ್ಪಾದನೆಯು ಶೇ 11.6ರಿಂದ ಶೇ 9.9ಕ್ಕೆ ಇಳಿಕೆ ಕಂಡಿದೆ. ಗಣಿ ಉತ್ಪಾದನೆಯು ಶೇ 5.2 ರಿಂದ ಶೇ 11.5ಕ್ಕೆ ಏರಿಕೆ ಕಂಡಿದೆ. ಬಂಡವಾಳ ಸರಕುಗಳ ಉತ್ಪಾದನೆಯು ಶೇ 11.4 ರಿಂದ ಶೇ 7.4ಕ್ಕೆ ಇಳಿಕೆ ಕಂಡಿದೆ. ಮೂಲಸೌಕರ್ಯ/ನಿರ್ಮಾಣ ಸರಕುಗಳ ವಲಯದ ಬೆಳವಣಿಗೆಯು ಶೇ 8.2 ರಿಂದ ಶೇ 7.5ಕ್ಕೆ ಇಳಿಕೆ ಕಡಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಬೆಳವಣಿಗೆಯು 2023–24ರ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಐಐಪಿ ಬೆಳವಣಿಗೆಯು ಶೇ 6ರಷ್ಟು ಆಗಿದೆ. 2022–23ರ ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ (ಶೇ 7.1) ಇಳಿಕೆ ಕಂಡುಬಂದಿದೆ.

ಅತಿಯಾದ ಮಳೆ ಮತ್ತು ಕೈಗಾರಿಕಾ ಚಟುವಟಿಕೆಗಳು ನಿಧಾನವಾಗಿ ಆರಂಭ ಆಗಿದ್ದರಿಂದ ಉತ್ಪಾದನೆ ಕಡಿಮೆ ಆಗಿದೆ ಎಂದು ಐಸಿಆರ್‌ಎನ ಆರ್ಥಿಕತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಯನ್ನು ಸೂಚಿಸುವ ಬಹುತೇಕ ಎಲ್ಲ ವಲಯಗಳು ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಸುಧಾರಣೆ ಕಂಡಿವೆ. ಮುಂದಿನ ತಿಂಗಳು ಕೈಗಾರಿಕಾ ಉತ್ಪಾದನೆಯು ಶೇ 7 ರಿಂದ ಶೇ 10ವರೆಗೆ ಆಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.