ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್, ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ₹ 3,610 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 5,129 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣ ಶೇ 30ರಷ್ಟು ಕಡಿಮೆಯಾಗಿದೆ. ತ್ರೈಮಾಸಿಕದಲ್ಲಿನ ವರಮಾನವು ವರ್ಷದ ಹಿಂದಿನ ₹ 17,794 ಕೋಟಿಗೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳಗೊಂಡು ₹ 21,400 ಕೋಟಿಗೆ ತಲುಪಿದೆ.

ಷೇರು ಮರುಖರೀದಿ: ಮುಕ್ತ ಮಾರುಕಟ್ಟೆ (ಷೇರುಪೇಟೆ) ಮೂಲಕ ₹8,260 ಕೋಟಿ ಮೊತ್ತದ ಷೇರುಗಳನ್ನು ಮರು ಖರೀದಿಸಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಸಮ್ಮತಿ ನೀಡಿದೆ. ಪ್ರತಿ ಷೇರಿನ ಬೆಲೆ ₹ 800 ಮೀರದಂತೆ ಈ ಮರು ಖರೀದಿ ಪ್ರಕ್ರಿಯೆ ನಡೆಯಲಿದೆ.

ಅಮೆರಿಕದ ಷೇರುಗಳನ್ನು (ಎಡಿಎಸ್) ಹೊಂದಿರುವವರು ಅವುಗಳನ್ನು ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ. ಷೇರು ಮರುಖರೀದಿ ಸಂದರ್ಭದಲ್ಲಿ ‘ಎಡಿಎಸ್’ಗಳನ್ನು ಭಾರತದ ಷೇರುಪೇಟೆಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಸಂಸ್ಥೆಯ ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ.

ವಿಶೇಷ ಲಾಭಾಂಶ: ಪ್ರತಿ ಷೇರಿಗೆ ₹4ರಂತೆ ವಿಶೇಷ ಲಾಭಾಂಶವನ್ನೂ ಸಂಸ್ಥೆಯು ಘೋಷಿಸಿದೆ. ಇದರ ಒಟ್ಟಾರೆ ಮೊತ್ತ ₹ 2,107 ಕೋಟಿಗಳಷ್ಟು ಇರಲಿದೆ. ಇದೇ 28ಕ್ಕೆ ಈ ಲಾಭಾಂಶ ಪಾವತಿಸಲು ದಿನ ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.