ನವದೆಹಲಿ: ಇನ್ಫೊಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಲೀಲ್ ಪಾರೇಖ್ ಅವರ ಒಟ್ಟು ವಾರ್ಷಿಕ ವೇತನ 2020–21ರಲ್ಲಿ ₹49.68 ಕೋಟಿಗೆ ಏರಿಕೆಯಾಗಿದೆ.

2019–20ರಲ್ಲಿ ಅವರ ಒಟ್ಟು ವಾರ್ಷಿಕ ವೇತನ ₹34.27 ಕೋಟಿ ಆಗಿತ್ತು.

ಕಂಪನಿಯು 2020–21ನೇ ಸಾಲಿನ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ಬಗ್ಗೆ ಉಲ್ಲೇಖಿಸಿದೆ. ಪಾರೇಖ್ ಅವರು ₹6.07 ಕೋಟಿ ವೇತನ, ₹12.62 ಕೋಟಿ ಬೋನಸ್, ಇನ್‌ಸೆಂಟಿವ್ಸ್ ಅಥವಾ ವೇರಿಯೇಬಲ್ ಪೇ ಹಾಗೂ ಇತರೆ ₹30.99 ಕೋಟಿ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಓದಿ:ಎಸ್ಬಿಐ ಎಟಿಎಂ ವಿತ್ಡ್ರಾ, ಚೆಕ್ ಬುಕ್ ಶುಲ್ಕ ಪರಿಷ್ಕರಣೆ

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಕಂಪನಿಯ ಸಿಇಒ, ಎಂಡಿ ರಾಜೇಶ್ ಗೋಪಿನಾಥನ್ ಅವರ 2020–21ನೇ ಸಾಲಿನ ವಾರ್ಷಿಕ ವೇತನ ₹20.36 ಕೋಟಿ ಆಗಿದೆ. ಇವರ ಒಟ್ಟು ವಾರ್ಷಿಕ ವೇತನ ಕಳೆದ ಬಾರಿ ₹13.3 ಕೋಟಿ ಆಗಿತ್ತು.

ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು 2020-21ರ ಅವಧಿಯಲ್ಲಿ ಕಂಪನಿಗೆ ಸಲ್ಲಿಸಿದ ಸೇವೆಗಳಿಗೆ ಸ್ವಯಂಪ್ರೇರಣೆಯಿಂದ ಸಂಭಾವನೆ ಪಡೆದಿಲ್ಲ ಎಂದೂ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ.ಪ್ರವೀಣ್ ರಾವ್ ಅವರ ವಾರ್ಷಿಕ ವೇತನ ಕಳೆದ ಹಣಕಾಸು ವರ್ಷದಲ್ಲಿ ₹10.6 ಕೋಟಿ ಇದ್ದುದು 2020–21ನೇ ಸಾಲಿನಲ್ಲಿ ₹17.33 ಕೋಟಿಗೆ ಹೆಚ್ಚಳವಾಗಿದೆ.

ಓದಿ:ಚಿನ್ನದ ಬೆಲೆ ಏರಿಕೆ: 10 ಗ್ರಾಂ ₹48,589ಕ್ಕೆ ಮಾರಾಟ

ಕಂಪನಿಯ ಬೆಳವಣಿಗೆಯ ಅವಕಾಶಗಳ ಬಗ್ಗೆ ಪಾರೇಖ್ ಅವರು ವಾರ್ಷಿಕ ವರದಿಯಲ್ಲಿ ಅಶಾವಾದ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಇನ್ಫೊಸಿಸ್‌ನ 40ನೇ ವಾರ್ಷಿಕ ಮಹಾಸಭೆಯು ಜೂನ್ 19ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.