ಬೆಂಗಳೂರು: 2024–25ನೇ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಮಿಳುನಾಡು ಮೂಲದ ಖಾಸಗಿ ವಲಯದ ಕರೂರು ವೈಶ್ಯ ಬ್ಯಾಂಕ್, ₹473 ಕೋಟಿ ನಿವ್ವಳ ಲಾಭ ಗಳಿಸಿದೆ.

2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹378 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 25ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್ ₹932 ಕೋಟಿ ಲಾಭ ಗಳಿಸಿದ್ದು, ಶೇ 26ರಷ್ಟು ಏರಿಕೆ ದಾಖಲಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹2,856 ಕೋಟಿ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹2,335 ಕೋಟಿ ಗಳಿಸಿತ್ತು.

ಬ್ಯಾಂಕ್ನ ಒಟ್ಟು ವಹಿವಾಟು ₹1.76 ಲಕ್ಷ ಕೋಟಿಯಾಗಿದ್ದು, ಶೇ 14ರಷ್ಟು ಹೆಚ್ಚಳವಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹1.53 ಲಕ್ಷ ಕೋಟಿ ಇತ್ತು. ನಿವ್ವಳ ಬಡ್ಡಿ ವರಮಾನವು ಶೇ 15ರಷ್ಟು ಏರಿಕೆಯಾಗಿದ್ದು, ₹1,060 ಕೋಟಿ ಆಗಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 1.10ರಷ್ಟು ಹಾಗೂ ನಿವ್ವಳ ಎನ್ಪಿಎ ಶೇ 0.28ರಷ್ಟಿದೆ.

ಸೆಪ್ಟೆಂಬರ್ 30ರಂತೆ ದೇಶದಲ್ಲಿ ಬ್ಯಾಂಕ್ನ 841 ಶಾಖೆಗಳು, 1 ಡಿಜಿಟಲ್ ಬ್ಯಾಂಕಿಂಗ್ ಘಟಕ ಮತ್ತು 2,208 ಎಟಿಎಂ ಹೊಂದಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್ ಬಾಬು ಬಿ. ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.