ನವದೆಹಲಿ: ಕಿಯಾ ಇಂಡಿಯಾ ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಸೆಲ್ಟೋಸ್ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 13,424 ಕಾರಿಗೆ ಬುಕಿಂಗ್ ಆಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.

ಶುಕ್ರವಾರದಿಂದ ಬುಕಿಂಗ್ ಆರಂಭಿಸಲಾಗಿದೆ. ಹಾಲಿ ಸೆಲ್ಟೋಸ್ ಬಳಕೆ ಮಾಡುತ್ತಿರುವವರಿಗೆ ‘ಕೆ–ಕೋಡ್’ ಎನ್ನುವ ವಿಶೇಷ ಕಾರ್ಯಕ್ರಮದಡಿ ಹೊಸ ಸೆಲ್ಟೋಸ್‌ಗೆ ಬುಕಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಈ ಮೂಲಕವೇ 1,973 ಕಾರಿಗೆ ಬುಕಿಂಗ್ ಆಗಿದೆ ಎಂದು ಕಂಪನಿ ತಿಳಿಸಿದೆ.

ವಿನ್ಯಾಸ, ವಿಭಾಗದಲ್ಲೇ ಮೊದಲು ಮತ್ತು ಅತ್ಯುತ್ತಮವಾದ ವೈಶಿಷ್ಟ್ಯಗಳ ಮೂಲಕ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ವಿಶ್ವಾಸವಿದೆ ಎಂದು ಕಿಯಾ ಇಂಡಿಯಾದ ಸಿಇಒ ಟೀ ಜಿನ್ ಪಾರ್ಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.