ನವದೆಹಲಿ: ಕಿಯಾ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.

ಏಪ್ರಿಲ್ 1ರಿಂದ ದರ ಹೆಚ್ಚಳವು ಜಾರಿಗೆ ಬರಲಿದೆ. ಸೆಲ್ಟೋಸ್, ಸಾನೆಟ್, ಕಾರೆನ್ಸ್ ಕಾರಿನ ಬೆಲೆ ಏರಿಕೆಯಾಗಲಿದೆ.

‘ವಾಹನಗಳ ತಯಾರಿಕೆಯ ಕಚ್ಚಾ ಸಾಮಗ್ರಿಗಳ ದರ ಏರಿಕೆಯಾಗಿದೆ. ಇದರಿಂದ ಉತ್ಪಾದನಾ ವೆಚ್ಚವೂ ಏರುಗತಿಯಲ್ಲಿದೆ. ಈ ವೆಚ್ಚವನ್ನು ಭಾಗಶಃ ಸರಿದೂಗಿಸಬೇಕಿದೆ. ಹಾಗಾಗಿ, ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗದಂತೆ ಅಲ್ಪ ಪ್ರಮಾಣದಲ್ಲಿ ದರ ಏರಿಸಲು ತೀರ್ಮಾನಿಸಲಾಗಿದೆ’ ಎಂದು ಕಿಯಾ ಇಂಡಿಯಾ ಮುಖ್ಯಸ್ಥ ಹರ್‌ದೀಪ್ ಎಸ್. ಬರಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.