ನವದೆಹಲಿ: ಖಾಸಗಿ ಸ್ವಾಮ್ಯದ ಕೋಟಕ್ ಮಹೀಂದ್ರ ಬ್ಯಾಂಕ್, 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹3,520 ಕೋಟಿ ನಿವ್ವಳ ಲಾಭಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹3,452 ಕೋಟಿ ಲಾಭ ಗಳಿಸಿತ್ತು. ಈ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇ 2ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್, ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹13,183 ಕೋಟಿ ವರಮಾನ ಗಳಿಸಲಾಗಿತ್ತು. ಈ ತ್ರೈಮಾಸಿಕದಲ್ಲಿ ₹15,675 ಕೋಟಿ ಗಳಿಸಲಾಗಿದೆ. ಬಡ್ಡಿ ವರಮಾನವು ₹12,746 ಕೋಟಿ ಆಗಿದೆ ಎಂದು ವಿವರಿಸಿದೆ.

ಬ್ಯಾಂಕ್ನ ವಸೂಲಾಗದ ಸಾಲದ (ಎನ್ಪಿಎ) ಸರಾಸರಿ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶೇ 1.39ರಷ್ಟು ಸ್ಥಿರವಾಗಿದೆ. ಆದರೆ, ನಿವ್ವಳ ಎನ್ಪಿಎ ಶೇ 0.40ರಿಂದ ಶೇ 0.35ಕ್ಕೆ ಇಳಿಕೆಯಾಗಿದೆ.

ಜೂನ್ ಅಂತ್ಯಕ್ಕೆ ಬ್ಯಾಂಕ್ನ ಸಮರ್ಪಕ ಬಂಡವಾಳ ಅನುಪಾತ (ಸಿಎಆರ್) ಶೇ 21.41ರಷ್ಟಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 21.12ರಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.