ನವದೆಹಲಿ: ನಗದು ಬಳಕೆ ತಗ್ಗಿಸಿ ಡಿಜಿಟಲ್ ಪಾವತಿ ಹೆಚ್ಚಿಸುವ ಉದ್ದೇಶದಿಂದ ನೋಟು ರದ್ದತಿ ಮಾಡಿದ ಮೂರು ವರ್ಷಗಳ ನಂತರವೂ ದೇಶದಲ್ಲಿ ಡಿಜಿಟಲ್ ಮೂಲ ಸೌಕರ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಲು ಪ್ರತಿ ವ್ಯಕ್ತಿಗೆ ಲಭ್ಯ ಇರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಸಾಧನಗಳ ಸಂಖ್ಯೆ ದೇಶದಲ್ಲಿ ಕಡಿಮೆ ಇದೆ. 22 ದೇಶಗಳ ಪೈಕಿ ಭಾರತದಲ್ಲಿನ ‘ಪಿಒಎಸ್’ಗಳ ಲಭ್ಯತೆ ಪ್ರಮಾಣ ತೀರ ಕಡಿಮೆ ಇದೆ. ನಮ್ಮಲ್ಲಿ ಪ್ರತಿ 358 ಜನರಿಗೆ ಒಂದು ಯಂತ್ರ ಲಭ್ಯ ಇದ್ದರೆ, ಚೀನಾದಲ್ಲಿ 20 ಜನರಿಗೆ ಮತ್ತು ಬ್ರೆಜಿಲ್‌ನಲ್ಲಿ 10 ಜನರಿಗೆ ಒಂದು ಸಾಧನ ಲಭ್ಯ ಇದೆ.

ಡಿಜಿಟಲ್ ಪಾವತಿ ಜನಪ್ರಿಯಗೊಳ್ಳದಿರಲು ಕಾರಣವಾದ ಸಂಗತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪಟ್ಟಿ ಮಾಡಿದೆ. ಸಾಕಷ್ಟು ಸಂಖ್ಯೆಯಲ್ಲಿ ‘ಪಿಒಎಸ್’ಗಳು ಲಭ್ಯವಾಗದಿರುವುದು, ಇಂತಹ ಪರ್ಯಾಯ ಪಾವತಿ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವಿನ ಕೊರತೆ, ಸುರಕ್ಷತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಕಳವಳ, ದೂರು ಇತ್ಯರ್ಥಕ್ಕೆ ವಿಳಂಬ ಮುಂತಾದ ಕಾರಣಗಳಿಗೆ ಜನರು ಡಿಜಿಟಲ್ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರ್‌ಬಿಐ ಈಗ ಕಾರ್ಯಪ್ರವೃತ್ತವಾಗಿದೆ. ನಗದುರಹಿತ (ಡಿಜಿಟಲ್) ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.