ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

LIC ಏಜೆಂಟ್‌ ಆದಾಯ ಹಿಮಾಚಲ ಪ್ರದೇಶದಲ್ಲಿ ಕಡಿಮೆ; ಅಂಡಮಾನ್‌ನಲ್ಲೇ ಹೆಚ್ಚು!

Published 18 ಆಗಸ್ಟ್ 2024, 13:24 IST
Last Updated 18 ಆಗಸ್ಟ್ 2024, 13:24 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಏಜೆಂಟ್‌ಗಳು ಮಾಸಿಕವಾಗಿ ಸರಾಸರಿ ₹10,328 ಆದಾಯ ಗಳಿಸುತ್ತಿದ್ದಾರೆ. ‌ಇದು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಏಜೆಂಟ್‌ಗಳಿಗೆ ಹೋಲಿಸಿದರೆ ಅತಿ ಕಡಿಮೆಯಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿನ ಎಲ್‌ಐಸಿ ಏಜೆಂಟ್‌ಗಳು ಮಾಸಿಕವಾಗಿ ಸರಾಸರಿ ಅತಿ ಹೆಚ್ಚು ₹20,446 ಆದಾಯ ಗಳಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಎಲ್‌ಐಸಿ ಸಲ್ಲಿಸಿರುವ ಅಂಕಿ–ಅಂಶಗಳು ತಿಳಿಸಿವೆ.

ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಅತಿ ಕಡಿಮೆ 273 ಏಜೆಂಟ್‌ಗಳಿದ್ದರೆ, ಹಿಮಾಚಲ ಪ್ರದೇಶದಲ್ಲಿ 12,731 ಏಜೆಂಟ್‌ಗಳಿದ್ದಾರೆ. ದೇಶದಲ್ಲಿ ಒಟ್ಟು 13.90 ಲಕ್ಷ ಎಲ್ಐಸಿ ಏಜೆಂಟ್‌ಗಳಿದ್ದಾರೆ ಎಂದು ತಿಳಿಸಿದೆ.

ಉತ್ತರಪ್ರದೇಶದಲ್ಲಿ ಗರಿಷ್ಠ 1.84 ಲಕ್ಷಕ್ಕೂ ಹೆಚ್ಚು ಏಜೆಂಟ್‌ಗಳಿದ್ದು, ಸರಾಸರಿ ಮಾಸಿಕ ಆದಾಯ ₹11,887 ಆಗಿದೆ. ಮಹಾರಾಷ್ಟ್ರ 1.61 ಲಕ್ಷ (₹14,931), ಪಶ್ಚಿಮ ಬಂಗಾಳ 1.19 ಲಕ್ಷ (₹13,512), ತಮಿಳುನಾಡು 87,374 (₹13,444), ಕರ್ನಾಟಕ 81,674 (₹13,265), ರಾಜಸ್ಥಾನದಲ್ಲಿ 75,310 ಏಜೆಂಟ್‌ಗಳಿದ್ದು ಮಾಸಿಕ ಸರಾಸರಿ ಆದಾಯ ₹13,960 ಪಡೆಯುತ್ತಿದ್ದಾರೆ. 

ಮಧ್ಯಪ್ರದೇಶದಲ್ಲಿ 63,779 ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ 40,469 ಎಲ್‌ಐಸಿ ಏಜೆಂಟ್‌ಗಳಿದ್ದು, ಮಾಸಿಕ ಸರಾಸರಿ ಆದಾಯ ಕ್ರಮವಾಗಿ ₹11,647 ಮತ್ತು ₹15,169 ಗಳಿಸುತ್ತಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT