ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಉದ್ಯೋಗಿಗಳಿಗೆ ಶೇ 17ರಷ್ಟು ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ ಬೆನ್ನಲ್ಲೇ ಎಲ್ಐಸಿ ಉದ್ಯೋಗಿಗಳಿಗೂ ಕೇಂದ್ರವು ಸಿಹಿ ಸುದ್ದಿ ನೀಡಿದೆ.

2022ರ ಆಗಸ್ಟ್ 1ರಿಂದ ಪೂರ್ವಾನ್ವಯವಾಗಲಿದೆ. ಇದರಿಂದ 1.10 ಲಕ್ಷ ಉದ್ಯೋಗಿಗಳು ಹಾಗೂ 30 ಸಾವಿರ ಪಿಂಚಣಿದಾರರಿಗೆ ಪ್ರಯೋಜನ ಸಿಗಲಿದೆ.

2010ರ ಏಪ್ರಿಲ್ 1ರಿಂದ ಕೆಲಸಕ್ಕೆ ಸೇರಿದ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್ಪಿಎಸ್) ಕೊಡುಗೆ ಪ್ರಮಾಣವನ್ನು ಪರಿಷ್ಕರಿಸಿದ್ದು, ಶೇ 10ರಿಂದ ಶೇ 14ಕ್ಕೆ ಹೆಚ್ಚಿಸಲಾಗಿದೆ. 24 ಸಾವಿರ ಉದ್ಯೋಗಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಪಿಂಚಣಿದಾರರಿಗೆ ಒಂದು ಬಾರಿ ಎಕ್ಸ್ಗ್ರೇಷಿಯಾ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.
.ಬ್ಯಾಂಕ್ ನೌಕರರ ವೇತನ ಶೇ 17ರಷ್ಟು ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.