ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

‘ಎಲ್ಐಸಿ ಬ್ರ್ಯಾಂಡ್ನ ಮೌಲ್ಯ ₹81,634 ಕೋಟಿ (9.8 ಬಿಲಿಯನ್ ಡಾಲರ್) ಆಗಿದೆ’ ಎಂದು ಲಂಡನ್ ಮೂಲದ ಬ್ರ್ಯಾಂಡ್ ಫೈನಾನ್ಸ್ ಇನ್ಸೂರೆನ್ಸ್ ವರದಿ ತಿಳಿಸಿದೆ.

ತೈವಾನ್ನ ಕ್ಯಾಥೆ ಜೀವ ವಿಮಾ ಸಂಸ್ಥೆಯು ಎರಡನೇ ಬಲಿಷ್ಠ ಬ್ರ್ಯಾಂಡ್ ಮೌಲ್ಯ ಹೊಂದಿದೆ. ಇದರ ಬ್ರ್ಯಾಂಡ್ ಮೌಲ್ಯ ₹40,817 ಕೋಟಿ ಆಗಿದೆ. ಮೂರನೇ ಸ್ಥಾನ ಗಿಟ್ಟಿಸಿಕೊಂಡಿರುವ ಆಸ್ಟ್ರೇಲಿಯಾದ ಎನ್ಆರ್ಎಂಎ ಇನ್ಸೂರೆನ್ಸ್ ಕಂಪನಿಯು ₹10,900 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿದೆ ಎಂದು ವರದಿ ತಿಳಿಸಿದೆ.

ವಿಮಾ ಕಂತು ಸಂಗ್ರಹದಲ್ಲೂ ಎಲ್ಐಸಿ ದಾಖಲೆ ಬರೆದಿದೆ. 2023ರಲ್ಲಿ ಒಟ್ಟು ₹39,090 ಕೋಟಿ ಸಂಗ್ರಹಿಸಿದೆ. ಎಸ್ಬಿಐ ಲೈಫ್ ಇನ್ಸೂರೆನ್ಸ್ ₹15,197 ಕೋಟಿ ಹಾಗೂ ಎಚ್ಡಿಎಫ್ಸಿ ಲೈಫ್ ಇನ್ಸೂರೆನ್ಸ್ ₹10,970 ಕೋಟಿ ವಿಮಾ ಕಂತು ಸಂಗ್ರಹಿಸಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.